ಹಮಾಲಿ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ತಾಲೂಕು ಸಮಿತಿಯಿಂದ ಎಪಿಎಂಸಿ ಮುಂದೆ ಪ್ರತಿಭಟನೆ

251221 Sindhanuru Hamali Labors Protest
ರಾಜ್ಯದ ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ತಾಲೂಕು ಸಮಿತಿ ಸಿಂಧನೂರಿನ ಎಪಿಎಂಸಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿತು.
Published on

ಸಿಂಧನೂರು: ರಾಜ್ಯದ ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ತಾಲೂಕು ಸಮಿತಿ ಎಪಿಎಂಸಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿತು.

ಅಸಂಘಟಿತ ಕಾರ್ಮಿಕರಲ್ಲಿಯೇ ಅತ್ಯಂತ ಶ್ರಮದಾಯಕ ಕೆಲಸ ನಿರ್ವಹಿಸುವ, ವ್ಯಾಪಾರ ವಹಿವಾಟುಗಳಲ್ಲಿ ಹಾಗೂ ಸರಕು ಸಾಗಾಣಿಕೆಯಲ್ಲಿ ಮಹತ್ವದ ಪಾತ್ರ ವಹಿಸುವ ಶ್ರಮಜೀವಿಗಳಾದ ಹಮಾಲಿ ಕಾರ್ಮಿಕರ ಬೇಡಿಕೆ ಈಡೇರಿದಿಲ್ಲ. ಇದರಿಂದ ಹೆಚ್ಚಿನ ತೊಂದರೆ ಅನುಭವಿಸಬೇಕಿದೆ. ಕೂಡಲೇ ರಾಜ್ಯ ಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತೆ ಮಂಡಳಿಯಿಂದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಬೇಕು. ಸರ್ಕಾರ ಲೋಡಿಂಗ್, ಅನ್‌ಲೋಡಿಂಗ್, ಉದ್ದಿಮೆಗೆ ಕನಿಷ್ಠ ವೇತನ ಜಾರಿ ಮಾಡಿ ಹಮಾಲಿ ಕಾರ್ಮಿಕರಿಗೆ ಕೂಲಿ ನಿಗದಿಪಡಿಸಿದ್ದು ಕೂಡಲೇ ಎಪಿಎಂಸಿಗಳಲ್ಲಿ ಜಾರಿ ಮಾಡಬೇಕು. ಮಂಡಳಿಯಿಂದ ನೀಡಲಾಗುವ ಅಂಬೇಡ್ಕರ್ ಸಹಾಯಹಸ್ತ ಸ್ಮಾರ್ಟ್‌ಕಾರ್ಡ್‌ಗಳನ್ನು ಪಡೆದ ಹಮಾಲರಿಗೆ ಸೌಲಭ್ಯ ಒದಗಿಸಬೇಕು.

60 ವರ್ಷ ಮೇಲ್ಪಟ್ಟ ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆ ಜಾರಿ ಮಾಡಬೇಕು. ಕಾಯಕನಿಧಿ ಯೋಜನೆಯಡಿ ಎಪಿಎಂಸಿ ಹಮಾಲಿ ಕಾರ್ಮಿಕರಿಗೆ ವೈದ್ಯಕೀಯ ಮರುಪಾವತಿ ಯೋಜನೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಮಹೆಬೂಬಸಾಬ್, ಕಾರ್ಯದರ್ಶಿ ರಾಮಣ್ಣ ತುರ್ವಿಹಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net