ಸೇವೆಗೆ ನೇಮಿಸಿಕೊಳ್ಳುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರಿಂದ ಸಿಂಧನೂರು ಮಿನಿವಿಧಾನಸೌಧದ ಮುಂದೆ ಪ್ರತಿಭಟನೆ

22012021 Sindhanoor Geust Lecture protest
Published on

ಸಿಂಧನೂರು: ತಕ್ಷಣ ಸೇವೆಗೆ ನೇಮಿಸಿಕೊಳ್ಳುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ತಾಲೂಕು ಘಟಕ ಶುಕ್ರವಾರ ಪ್ರವಾಸಿ ಮಂದಿರದಿಂದ ಮಿನಿವಿಧಾನಸೌಧ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತು.

ರಾಜ್ಯದ 412 ಸರ್ಕಾರಿ ಪದವಿ ಕಾಲೇಜುಗಳಲ್ಲಿ 14,500ಕ್ಕಿಂತಲೂ ಅಧಿಕ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಕಳೆದ ಒಂಬತ್ತು ತಿಂಗಳಿಂದ ಸೇವೆಗೆ ಸೇರಿಸಿಕೊಳ್ಳದೆ ಕಾಲೇಜು ಶಿಕ್ಷಣ ಇಲಾಖೆ 2021ರ ಜನವರಿ 20ರಂದು ಆದೇಶ ಹೊರಡಿಸಿದೆ. ಇದರಿಂದ ಅರ್ಧದಷ್ಟು ಉಪನ್ಯಾಸಕರು ಹೊರಗುಳಿದಿದ್ದಾರೆ. ತಕ್ಷಣವೇ ಹಳೆಯ ಆದೇಶ ರದ್ದುಪಡಿಸಬೇಕು. 2019-20ನೇ ಸಾಲಿನಲ್ಲಿ ಸೇವೆ ಸಲ್ಲಿಸಿದ ಎಲ್ಲ ಉಪನ್ಯಾಸಕರನ್ನು 2020-21ನೇ ಸಾಲಿನ ಶೈಕ್ಷಣಿಕ ವರ್ಷವಿಡೀ ಸೇವೆಯಲ್ಲಿರುವಂತೆ ಹೊಸ ಆದೇಶ ಹೊರಡಿಸಬೇಕು. 12 ತಿಂಗಳ ವೇತನ ಹಾಗೂ ಆರೋಗ್ಯ ವಿಮೆ ನೀಡಬೇಕು ಎಂದು ಪ್ರತಿಭಟನೆ ನಿರತರು ಒತ್ತಾಯಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಣ್ಣ ಹಿರೇಬೇರಿಗಿ, ಉಪಾಧ್ಯಕ್ಷರಾದ ವಿಶ್ವನಾಥ ಪಾಟೀಲ್ ಗೋನಾಳ, ಡಾ.ಮದಗಪ್ಪ, ಸದಸ್ಯರಾದ ಡಾ.ಅರುಣಕುಮಾರ ಬೇರಿಗಿ, ಡಾ.ಬಸವರಾಜ ಬಳಿಗಾರ, ಡಾ.ಬಸವರಾಜ ನಾಯಕ, ಡಾ.ಶರೀಫ್ ಹಸಮಕಲ್, ಡಾ.ನಾಗಾರಾಜ, ನಾರಾಯಣ ಬೆಳಗುರ್ಕಿ, ಚಂದ್ರಶೇಖರ ಗೊರೇಬಾಳ, ಶಂಕರ ವಾಲೀಕಾರ್, ವಿಜಯಲಕ್ಷ್ಮಿ ಗುರಿಕಾರ, ಪ್ರಶಾಂತಿ, ಅಶ್ವಿನಿ, ಮೇರಿಗ್ರೇಸಿ, ಸುಜಾತ, ಗಂಗಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net