

ಸಿಂಧನೂರು: ತಾಲೂಕಿನ ಎಲ್ಲಾ ಗ್ರಾಪಂಯ ಪಿಡಿಒಗಳು ಹಾಗೂ ಅಧ್ಯಕ್ಷರನ್ನೊಳಗೊಂಡಂತೆ ಕುಂದುಕೊರತೆಗಳ ಚರ್ಚೆಗೆ ಅವಕಾಶ ಮಾಡಿಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಗ್ರಾಪಂ ಸದಸ್ಯರ ಒಕ್ಕೂಟ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪವನಕುಮಾರರಿಗೆ ಶುಕ್ರವಾರ ಮನವಿ ಸಲ್ಲಿಸಿತು.
15ನೇ ಹಣಕಾಸು ಕ್ರಿಯಾ ಯೋಜನೆಗೆ ಅನುಮೋದನೆ ನೀಡುವುದು, ನರೇಗಾ ಕಾಮಗಾರಿಗಳ ಮೆಟಿರಿಯಲ್ ಕೆಲಸಕ್ಕೆ ಕ್ರಿಯಾಯೋಜನೆ ತಯಾರಿಸಿ ಅನುಮೋದನೆಗೊಳಿಸಿ ಕೆಲಸಕ್ಕೆ ಅನುವುದು ಮಾಡಿಕೊಡುವುದು. ಅಧ್ಯಕ್ಷ, ಉಪಾಧ್ಯಕ್ಷ್ಷ, ಸದಸ್ಯರ ಗೌರವಧನ ಬಿಡುಗಡೆಗೊಳಿಸುವುದು. ಗೌರವಧನ ಹೆಚ್ಚಿಸುವುದು. ಪ್ರತಿ ತಿಂಗಳ ಸಮಯಕ್ಕೆ ಕಾಯ್ದೆ ಪ್ರಕಾರ ಸಕಾಲದಲ್ಲಿ ಸಾಮಾನ್ಯ ಸಭೆ ನಡೆಸುವುದು. 14ನೇ ಹಣಕಾಸು ಹಾಗೂ 15ನೇ ಹಣಕಾಸಿನ ಬಾಕಿ ಹಣ ಬಿಡುಗಡೆ ಮಾಡುವುದು. ಸರಿಯಾಗಿ ಕಾರ್ಯನಿರ್ವಹಿಸದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಬಗ್ಗೆ ಕ್ರಮ ಜರುಗಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಮಹಾಂತೇಶ ಹಿರೇಗೌಡರ, ಪ್ರಧಾನ ಕಾರ್ಯದರ್ಶಿ ರವಿಗೌಡ ಮಲ್ಲದಗುಡ್ಡ, ಅಶೋಕ ನಲ್ಲಾ, ದಶರಥರೆಡ್ಡಿ, ಬಸವರಾಜ ಇತರರಿದ್ದರು.