ಸರ್ಕಾರಿ ಆಸ್ಪತ್ರೆ ಕಾರ್ಯ ಉತ್ತಮವಾಗಿದೆ; ಆರೋಗ್ಯ ಇಲಾಖೆಯ ಕಲಬುರ್ಗಿ ವಿಭಾಗೀಯ ಸಹನಿರ್ದೇಶಕ ಶಿವಾನಂದ ಡಿ.ಸುರಗಾಳಿ ಮೆಚ್ಚುಗೆ

02022021 sindhanoor Divisional officer Hospital Visit
Published on

ಸಿಂಧನೂರು: ಸಾರ್ವಜನಿಕ ಆಸ್ಪತ್ರೆಯಲ್ಲಿ ಉತ್ತಮ ಕೆಲಸ ನಡೆಯುತ್ತಿದ್ದು, ಇನ್ನೂ ಕೆಲ ಮಾರ್ಪಾಡು ಮಾಡಿಕೊಳ್ಳಬೇಕು ಎಂದು ಸೂಚಿಸಿರುವೆ ಎಂದು ಆರೋಗ್ಯ ಇಲಾಖೆಯ ಕಲಬುರ್ಗಿ ವಿಭಾಗೀಯ ಸಹನಿರ್ದೇಶಕ ಶಿವಾನಂದ ಡಿ.ಸುರಗಾಳಿ ತಿಳಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ, ಆಸ್ಪತ್ರೆಯ ಎಲ್ಲ ವಾರ್ಡ್‌ಗಳನ್ನು ಪರಿಶೀಲಿಸಿ, ಸೌಲಭ್ಯದ ಬಗ್ಗೆ ರೋಗಿಗಳನ್ನು ವಿಚಾರಿಸಿದರು. ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು. ನಂತರ ಹೆರಿಗೆ ವಾರ್ಡ್‌ಗೆ ಭೇಟಿ ನೀಡಿ, ದಾಖಲೆ ಪರಿಶೀಲಿಸಿದರು. ಹೆರಿಗೆ ಮಾಡಿಸಿಕೊಂಡವರು ಸರ್ಕಾರದಿಂದ ಸಿಗುವ ಸೌಲತ್ತು ಪಡೆಯಲು ಆರೋಗ್ಯ ಕಾರ್ಡ್ ಜತೆಗೆ ಬ್ಯಾಂಕ್ ಪಾಸ್‌ಬುಕ್ ಲಗತ್ತಿಸಿದರೆ ಹಣ ನೇರವಾಗಿ ಖಾತೆಗೆ ಜಮಾವಣೆಯಾಗುವುದು ಎಂದು ಬಾಣಂತಿಯರಿಗೆ ತಿಳಿಸಿದರು.

ಆರೋಗ್ಯ ಇಲಾಖೆ ನಿರ್ದೇಶಕ ಶಂಕ್ರಪ್ಪ, ತಾಲೂಕು ಆರೋಗ್ಯ ಅಧಿಕಾರಿ ಡಾ.ನಂದಕುಮಾರ, ಮುಖ್ಯ ವೈದ್ಯಾಧಿಕಾರಿ ಡಾ.ಸುರೇಶರಡ್ಡಿ, ಡಾ.ಜೀವನೇಶ್ವರಯ್ಯ, ಆರೋಗ್ಯ ಸಿಬ್ಬಂದಿ ಶಶಿಧರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net