25ರ ವರೆಗೆ ಎಡದಂಡೆ ಕಾಮಗಾರಿ ಕೈಗೊಳ್ಳಿ; ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಗುತ್ತಿಗೆದಾರರಿಗೆ ಸೂಚನೆ

19072020 Sindhanoor K Virupakshappa Visit to Canala Work
Published on

ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆ ಆಧುನೀಕರಣ ಕಾಮಗಾರಿ ಜು.25 ವರೆಗೆ ಮಾತ್ರ ಕೈಗೊಂಡು, ನಾಲೆಗೆ ನೀರು ಹರಿಸಲು ಅನುಕೂಲ ಮಾಡಿಕೊಡಬೇಕೆಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಸೂಚಿಸಿದರು.

ಸೋಮನಾಳ ಬಳಿ ನಡೆಯುತ್ತಿರುವ ತುಂಗಭದ್ರಾ ಎಡದಂಡೆ ನಾಲೆ ಆಧುನೀಕರಣ ಕಾಮಗಾರಿ ವೀಕ್ಷಿಸಿ ಮಾತನಾಡಿದರು. ಕಾಮಗಾರಿ ಈ ಮೊದಲೇ ಕೈಗೊಳ್ಳಬೇಕಿತ್ತು. ಪದೇ ಪದೆ ಕಾಲುವೆಗೆ ಬೋಂಗಾ ಬೀಳುತ್ತಿರುವುದರಿಂದ ಈಗ ಆ ಸ್ಥಳದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. 2 ಕಿ.ಮೀ ಮಾತ್ರ ಕಾಮಗಾರಿ ನಡೆಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಜು. 25 ರೊಳಗೆ ಕಾಮಗಾರಿ ಗುಣಮಟ್ಟದಲ್ಲಿ ಮುಗಿಸಲು ತಿಳಿಸಲಾಗಿದ್ದು ಮುಂದಿನ ಕಾಮಗಾರಿ ಬೇಸಿಗೆಯಲ್ಲಿ ಕೈಗೊಳ್ಳುವಂತೆ ಸೂಚಿಸಿದರು. ಈಗಾಗಲೇ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚುತ್ತಿದ್ದು ಈ ತಿಂಗಳ ಅಂತ್ಯದಲ್ಲಿ ಐಸಿಸಿ ಸಭೆ ಕರೆದು, ನೀರು ಬಿಡುವ ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಎಂ.ಎಸ್. ಶ್ರೀನಿವಾಸ, ಎಂ.ರಂಗನಗೌಡ ಗೊರೇಬಾಳ, ನಾಗೋಜಿ ಮರಾಠಿ, ರಾಮಣ್ಣ ಮಾವಿನಮಡು ಇದ್ದರು.

ಜು. 25 ರೊಳಗೆ ಕಾಮಗಾರಿ ಗುಣಮಟ್ಟದಲ್ಲಿ ಮುಗಿಸಲು ತಿಳಿಸಲಾಗಿದ್ದು ಮುಂದಿನ ಕಾಮಗಾರಿ ಬೇಸಿಗೆಯಲ್ಲಿ ಕೈಗೊಳ್ಳುವಂತೆ ಸೂಚಿಸಿದರು. ಈಗಾಗಲೇ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚುತ್ತಿದ್ದು ಈ ತಿಂಗಳ ಅಂತ್ಯದಲ್ಲಿ ಐಸಿಸಿ ಸಭೆ ಕರೆದು, ನೀರು ಬಿಡುವ ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಎಂ.ಎಸ್. ಶ್ರೀನಿವಾಸ, ಎಂ.ರಂಗನಗೌಡ ಗೊರೇಬಾಳ, ನಾಗೋಜಿ ಮರಾಠಿ, ರಾಮಣ್ಣ ಮಾವಿನಮಡು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net