ಶಿಕ್ಷಣದ ಜತೆಗೆ ಮಕ್ಕಳಿಗೆ ಸಂಸ್ಕಾರ ಕೊಡಿ ಎಂದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ

301020 Sindhanuru Talent Award Programme
ಸಿಂಧನೂರಿನಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ನರಸೀಪುರ ಅಂಬಿಗರ ಚೌಡಯ್ಯ ಗುರುಪೀಠದ ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿದರು.
Published on

ಸಿಂಧನೂರು: ಸಮುದಾಯ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕು ನರಸೀಪುರ ಅಂಬಿಗರ ಚೌಡಯ್ಯ ಗುರುಪೀಠದ ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.

ನಗರದ ಹಂಚೇರ ಓಣಿಯ ಗಂಗಾಮತಸ್ಥರ ಸಮುದಾಯ ಭವನದಲ್ಲಿ ತಾಲೂಕು ಗಂಗಾಮತಸ್ಥ ಸಂಘ, ಗಂಗಾಮತಸ್ಥ ನೌಕರರ ಸಂಘ ಹಾಗೂ ಅಂಬಿಗ ಯುವ ಸೇನೆ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಗಂಗಾಮತಸ್ಥರ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮುದಾಯದ ನೂತನ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಧಿಕಾರಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳಿಗಿಂದು ಸಂಸ್ಕಾರ ನೀಡುವುದು ಅತ್ಯಗತ್ಯವಾಗಿದೆ. ಈಗಿನ ಬೆಳವಣಿಗೆಯೂ ಅಪಾಯಕಾರಿಯಾಗಿದ್ದು ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳಿಸುವ ಮಕ್ಕಳೇ ಹೆಚ್ಚಾಗುತ್ತಿದ್ದಾರೆ. ಶಿಕ್ಷಣದ ಜತೆಗೆ ಸಂಸ್ಕಾರ ಇದ್ದರೆ, ಉತ್ತಮ ಜೀವನ ಸಾಧ್ಯ ಎಂದರು.

ಗಂಗಾಮತಸ್ಥರ ಸಂಘದ ಅಧ್ಯಕ್ಷ ಬಿ.ಮೌಲಾಲಿ ಮಾತನಾಡಿ, ಸಮುದಾಯಕ್ಕೆ ಸೌಲತ್ತು ಒದಗಿಸಿಕೊಡಲು ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ. ಎಲ್ಲರ ಧ್ವನಿ ಒಗ್ಗೂಡಬೇಕಿದೆ ಎಂದರು. ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಬಿ.ಕೊಮಾರೆಪ್ಪ, ಇಮಾಮ್‌ಸಾಬ್ ಹಡಗಲಿ, ಶಿವಕುಮಾರ ನಾಟೀಕಾರ, ನಾಗರಾಜ ವಕೀಲ, ಜೆ.ರಾಯಪ್ಪ ವಕೀಲ, ರಾಜೇಶ್ವರಿ, ಮಂಜುನಾಥ ಸೋಮಲಾಪುರ, ಅಮರೇಶ ಬಾಗೋಡಿ, ಹನುಮೇಶ ಗುಡದೂರು, ಅಮರೇಶ ಕಾಮನಕೇರಿ, ನಜೀರ್ ಕೋರಿ, ಮಾರುತಿ ಸೋಮಲಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net