

ಸಿಂಧನೂರು: ದಾಸೋಹಕ್ಕೆ ಹೊಸ ಅರ್ಥ ನೀಡಿದ ಸಿದ್ಧಗಂಗಾದ ಶಿವಕುಮಾರ ಸ್ವಾಮೀಜಿ ಜಗತ್ತಿಗೆ ದೇವರು ಎನಿಸಿಕೊಂಡಿದ್ದಾರೆ ಎಂದು ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯಸ್ವಾಮೀಜಿ ಹೇಳಿದರು.
ನಗರದ ಶಿವಲಿಂಗ ದೇವಸ್ಥಾನದಲ್ಲಿ ಗುರುವಾರ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಯವರ ಪುಣ್ಯ ಸ್ಮರಣೋತ್ಸವ ಅಂಗವಾಗಿ ವನಸಿರಿ ಫೌಂಡೇಶನ್ ವತಿಯಿಂದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. 12ನೇ ಶತಮಾನದಲ್ಲಿ ಶಿವಶರಣರು ಬದುಕಿಗೆ ಹೊಸ ಭಾಷ್ಯ ಬರೆದರೆ, 21 ನೇ ಶತಮಾನದಲ್ಲಿ ಶಿವಕುಮಾರಸ್ವಾಮೀಜಿ ದಾಸೋಹ, ಜ್ಞಾನಕ್ಕೆ ಹೊಸ ಭಾಷ್ಯ ಬರೆದರು ಎಂದರು.
ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಪ್ರಮುಖರಾದ ಶಂಕರಗೌಡ ಎಲೆಕೂಡ್ಲಿಗಿ, ಖಾಜಾವಲಿ ದೊಡ್ಡಮನಿ, ವೀರೇಶ ಯಡಿಯೂರಮಠ, ನಾಗರಾಜ ಖಂಡಿಮಠ, ಸಂಗೀತ ಸಾರಂಗಮಠ, ಭಾರತಿ ಗುಡದೂರು, ಮಹಾಂತೇಶ ಉಪ್ಪಾರ, ಬಸವರಾಜ, ಪಂಪನಗೌಡ , ಭೀಮನಗೌಡ ವಕೀಲ, ವಿರುಪಾಕ್ಷಿ, ಬಾಬು, ಪಂಪಣ್ಣ ದೇಸಾಯಿ, ರಮೇಶ ಅಗ್ನಿ, ತಿಪ್ಪಣ್ಣ, ಚನ್ನಬಸಯ್ಯ, ಶರಣಬಸವ, ಮಲ್ಲಿಕಾರ್ಜುನ, , ನಾಗಪ್ಪ ಇದ್ದರು.