ನೆಮ್ಮದಿಯ ನಿಟ್ಟುಸಿರುಬಿಟ್ಟ ಸಿಂಧನೂರು ಜನ; 26ಕ್ಕೆ ಇಳಿದ ಕರೊನಾ ಪಾಸಿಟಿವ್ ಸಂಖ್ಯೆ

01062021 Sindhanoor Positive cases down
Published on

6 ದಿನಗಳ ಹಿಂದೆ ಒಂದೇ ದಿನ 344 ಬಂದಿತ್ತು

ಸಿಂಧನೂರು: ನಿತ್ಯ 100ರ ಗಡಿದಾಟುತ್ತಿದ್ದ ಕರೊನಾ ಪಾಸಿಟಿವ್ ಸಂಖ್ಯೆ ಮಂಗಳವಾರ 26ಕ್ಕೆ ಇಳಿಕೆದಿದ್ದರಿಂದ ತಾಲೂಕಿನ ಜನ ತುಸು ನಿರುಮ್ಮಳರಾಗಿದ್ದಾರೆ.

ಪಾಸಿಟಿವ್ ಬಂದವರು ಚಿಕಿತ್ಸೆಗೆ ಕೋವಿಡ್ ಕೇಂದ್ರಕ್ಕೆ ಬರುತ್ತಿದ್ದು ಕೇಸ್ ಕಡಿಮೆಯಾಗಲು ಕಾರಣವಾಗಿದೆ. 6 ದಿನಗಳ ಹಿಂದೆ ಒಂದೇ ದಿನ 344 ಪಾಸಿಟಿವ್ ಬಂದಿತ್ತು. ಇದರಿಂದ ಜನ ಆತಂಕಗೊಂಡಿದ್ದರು. ನಂತರ ಕ್ರಮೇಣ 200, 150, 120, 82ರಂತೆ ಇಳಕೆಯಾಗುತ್ತ ಬಂದು ಮಂಗಳವಾರ 26ಕ್ಕೆ ಬಂದು ನಿಂತಿದೆ.

ತಹಸೀಲ್ದಾರ್ ಮಂಜುನಾಥ ಭೋಗಾವತಿ ನೇತೃತ್ವದ ವಿಶೇಷ ತಂಡ ಗ್ರಾಮೀಣ ಪ್ರದೇಶದಲ್ಲಿ ಪಾಸಿಟಿವ್ ಬಂದವರೆಲ್ಲರನ್ನೂ ಮನವೊಲಿಸಿ ಕೋವಿಡ್ ಕೇಂದ್ರಕ್ಕೆ ಸೇರ‌್ಪಡೆ ಮಾಡುತ್ತಿರುವುದರಿಂದ ಈ ರೀತಿ ಇಳಿಕೆಗೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net