ಪ್ರತಿಭೆಗಳನ್ನು ಸಮುದಾಯ ಗುರುತಿಸಲಿ; ತಾಲೂಕು ನದಾಫ್ ಸಂಘದ ಅಧ್ಯಕ್ಷ ಅಮೀನ್‌ಸಾಬ್ ಸಾಹುಕಾರ ಸಲಹೆ

20092020 Sindhanur Pratibha puraskara
Published on

ಸಿಂಧನೂರು: ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಸಮುದಾಯದ ಆದ್ಯ ಕರ್ತವ್ಯ ಎಂದು ತಾಲೂಕು ನದಾಫ್ ಸಂಘದ ಅಧ್ಯಕ್ಷ ಅಮೀನ್‌ಸಾಬ್ ಸಾಹುಕಾರ ಹೇಳಿದರು.

ತಾಲೂಕಿನ ಬೂತಲದಿನ್ನಿ ಗ್ರಾಮದಲ್ಲಿ ತಾಲೂಕು ನದಾಫ್-ಪಿಂಜಾರ ಸಂಘ ಭಾನುವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಭೆ ಯಾರ ಸ್ವತ್ತಲ್ಲ. ಯಾರು ವಿದ್ಯೆಗೆ ಆದ್ಯತೆ ನೀಡುವರೋ ಅಂಥವರಿಗೆ ವಿದ್ಯೆ ಒಲಿಯಲಿದೆ. ಸಮುದಾಯ ವಿದ್ಯಾರ್ಥಿಗಳು ಕೂಡ ಉತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳು ಜ್ಞಾನದ ಹಸಿವಿನಿಂದ ಇರಬೇಕೆಂದರು.

ಜಿಲ್ಲಾ ನದಾಫ್ ಸಂಘದ ಅಧ್ಯಕ್ಷ ಮಹೆಬೂಬ್‌ಸಾಬ್ ಸಂತೆಕೆಲ್ಲೂರು ಮಾತನಾಡಿ, ಸಮುದಾಯ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು ಸಮುದಾಯ ಏಳ್ಗೆಗೆ ಶಿಕ್ಷಣವೊಂದೆ ಮಾರ್ಗವಾಗಿದ್ದು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದು ತಿಳಿಸಿದರು. ವಕೀಲ ಶೇಕ್ಷಾವಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಮಹೆಬೂಬ್ ಸಾಹುಕಾರ ಮುಳ್ಳೂರು, ಖಾಜಾಸಾಬ್ ಮಾಡಗಿರಿ, ದೌವಲ್‌ಸಾಬ್, ಮೊಹೀನ್‌ಪಾಷಾ ಬೂತಲದಿನ್ನಿ, ಶರಣಪ್ಪ ಅಂಗಡಿ, ಗ್ರಾಪಂ ಸದಸ್ಯ ಮಹ್ಮದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net