ಪಕ್ಷ ಸಂಘಟನೆಯಲ್ಲಿ ತೊಡಗಿ; ಕಾರ್ಯಕರ್ತೆಯರಿಗೆ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವಿಜಯರಾಜೇಶ್ವರಿ ಸೂಚನೆ

30072021 Sindhanoor BJP Meeting
Published on


ಸಿಂಧನೂರು: ಪಕ್ಷ ಸಂಘಟನೆಗೆ ಸಕ್ರಿಯವಾಗಿ ತೊಡಗಿಕೊಳ್ಳಬೇಕೆಂದು ಬಿಜೆಪಿ ರಾಯಚೂರು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯರಾಜೇಶ್ವರಿ ಹೇಳಿದರು.

ಮಹಿಳಾ ಮೋರ್ಚಾ ನಗರ ಹಾಗೂ ಗ್ರಾಮೀಣ ಮಂಡಲ ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ‌್ಯಕ್ಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು. ನಗರ ಹಾಗೂ ಗ್ರಾಮೀಣ ಮಂಡಲದಲ್ಲಿ ಪಕ್ಷ ಸಂಘಟನೆಯಾಗಬೇಕಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಮೋರ್ಚಾ ಪದಾಧಿಕಾರಿಗಳು ರೂಪುರೇಷೆ ಹಾಕಿಕೊಳ್ಳಬೇಕು. ಪಕ್ಷದ ಮಾರ್ಗಸೂಚಿಯಂತೆ ಕಾರ್ಯಕ್ರಮ ಆಯೋಜಿಸಬೇಕು ಎಂದು ಹೇಳಿದರು.

ಬಿಜೆಪಿ ನಗರ ಅಧ್ಯಕ್ಷೆ ಪ್ರೇಮಾ ಸಿದ್ಧಾಂತಿಮಠ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಮತಾ ಹಿರೇಮಠ, ಗ್ರಾಮೀಣ ಮಹಿಳಾಮೋರ್ಚಾ ಅಧ್ಯಕ್ಷೆ ನೀಲಮ್ಮ ಅಲಬನೂರು, ನಗರಮೋರ್ಚಾ ಅಧ್ಯಕ್ಷೆ ಶಾರದಮ್ಮ, ಪ್ರಧಾನ ಕಾರ್ಯದರ್ಶಿ ಮಂಗಮ್ಮ ಹೊಸಳ್ಳಿಕ್ಯಾಂಪ್, ಜಯಶ್ರೀ ರಡ್ಡಿ, ಸುಭದ್ರಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net