ಬೆಳಗುರ್ಕಿ ಗ್ರಾಮಕ್ಕೆ ಶುದ್ಧ ನೀರು ಪೂರೈಸಲು ಸೂಚಿಸಿದ ತಹಸೀಲ್ದಾರ ಮಂಜುನಾಥ ಭೋಗಾವತಿ

24012021 Sindhanoor pure water discus
Published on

ಸಿಂಧನೂರು: ಬೆಳಗುರ್ಕಿ ಗ್ರಾಮಕ್ಕೆ ಶುದ್ಧ ಕುಡಿವ ನೀರಿನ ಪೂರೈಕೆಗೆ ಗ್ರಾಪಂ ಮುಂದಾಗಬೇಕೆಂದು ತಹಸೀಲ್ದಾರ್ ಮಂಜುನಾಥ ಭೋಗಾವತಿ ಸೂಚಿಸಿದರು.

ತಾಲೂಕಿನ ಬೆಳಗುರ್ಕಿ ಗ್ರಾಮಕ್ಕೆ ಅಧಿಕಾರಿಗಳ ತಂಡದೊಂದಿಗೆ ಭಾನುವಾರ ಭೇಟಿ ನೀಡಿ ಕುಡಿವ ನೀರಿನ ಕೆರೆ ಪರಿಶೀಲನೆ ಬಳಿಕ ಮಾತನಾಡಿದರು. ಕುಡಿವ ನೀರಿನ ಕೆರೆಯಲ್ಲಿರುವ ನೀರು ಕುಡಿಯಲು ಯೋಗ್ಯ ಇಲ್ಲವೆಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಉಪವಿಭಾಗ ರಸಾಯನ ತಜ್ಞರು ವರದಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಆರ್‌ಒ ಪ್ಲಾಂಟ್ ನೀರನ್ನು ಒಂದು ತಿಂಗಳವರೆಗೆ ಉಚಿತ ಒದಗಿಸಿ ಎಂದು ಸೂಚಿಸಲಾಯಿತು. ತಾಪಂ ಇಒ ಪವನಕುಮಾರ, ಆರೋಗ್ಯಾಧಿಕಾರಿ ಡಾ.ನಂದಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net