ಅಂಬಾದೇವಿ ರಥೋತ್ಸವ ಸರಳ ಆಚರಣೆ; ಕೋವಿಡ್-19 ನಿಯಮ ಪಾಲನೆ

28012021 sindhanoor Ambadevi
Published on

ಸಿಂಧನೂರು: ತಾಲೂಕಿನ ಸುಕ್ಷೇತ್ರ ಸಿದ್ದಪರ್ವತ ಅಂಬಾಮಠದ ಶ್ರೀ ಅಂಬಾದೇವಿ ಜಾತ್ರೋತ್ಸವ ನಿಮಿತ್ತ ತಾಲೂಕು ಆಡಳಿತ ಕೋವಿಡ್-19 ನಿಯಮದಂತೆ ಗುರುವಾರ ಸರಳವಾಗಿ ರಥೋತ್ಸವ ನಡೆಸಿತು.

ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಜಾತ್ರೆ ರದ್ದುಪಡಿಸಿ ಆದೇಶ ಹೊರಡಿಸಿದ್ದರು. ಭಕ್ತರು ಜಾತ್ರೆಗೆ ಬರದಂತೆ ತಾಲೂಕಾಡಳಿತ ಜನಜಾಗೃತಿ ಮೂಡಿಸಿತ್ತು. ಆದಾಗ್ಯೂ ರಾಜ್ಯದ ವಿವಿಧೆಡೆಗಳಿಂದ ದೇವಿಯ ದರ್ಶನಕ್ಕೆ ಭಕ್ತರು ಆಗಮಿಸಿದ್ದರು. ಗುರುವಾರ ಬೆಳಗಿನ ಜಾವದಲ್ಲಿಯೇ ರಥೋತ್ಸವಕ್ಕೆ ತಹಸೀಲ್ದಾರ್ ಮಂಜುನಾಥ ಭೋಗಾವತಿ ಮತ್ತು ಅರ್ಚಕರು ಪೂಜೆ ನೆರವೇರಿಸಿ ಚಾಲನೆ ನೀಡಿದರು. ರಥೋತ್ಸವ ವೇಳೆ ಅಂಬಾದೇವಿಗೆ ಜಯಘೋಷ ಮೊಳಗಿದವು. ಭಕ್ತರು ಬಾಳೆಹಣ್ಣನ್ನು ರಥೋತ್ಸವಕ್ಕೆ ಎಸೆದು ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸಿದರು. ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net