ಖರೀದಿ ಕೇಂದ್ರ ಆರಂಭಿಸಲು ಕ್ರಮಕೈಗೊಳ್ಳಿ, ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಲಹೆ

041122 Sindhanuru MLA Nad Gowda Village Stay Program
ಸಿಂಧನೂರಿನಲ್ಲಿ ಜೆಡಿಎಸ್‌ನಿಂದ ಆಯೋಜಿಸಿದ್ದ ಶಾಸಕ ವೆಂಕಟರಾವ ನಾಡಗೌಡ ಅವರ ಜನಸಂಪರ್ಕ ಸಭೆ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಮೂರುಮೈಲ್‌ಕ್ಯಾಂಪ್ ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರ ಉದ್ಘಾಟಿಸಿದರು.
Published on

ಸಿಂಧನೂರು: ಅಭಿವೃದ್ಧಿ ಕೆಲಸಗಳೇ ಜನಪ್ರತಿನಿಧಿಗಳಿಗೆ ಶ್ರೀರಕ್ಷೆಯಾಗಿರುತ್ತವೆ ಎಂದು ಮೂರುಮೈಲ್‌ಕ್ಯಾಂಪ್ ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಜೋಳದರಾಶಿ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಜೆಡಿಎಸ್‌ನಿಂದ ಆಯೋಜಿಸಿದ್ದ ನಾಡಗೌಡರ ನಡೆ ಸಾಧನೆಯ ಕಡೆ ಜನಸಂಪರ್ಕ ಸಭೆ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ರೈತರ ಬೆಳೆಗಳು ಕಟಾವ್‌ಗೆ ಬಂದಿರುವ ಹಿನ್ನೆಲೆಯಲ್ಲಿ ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಲು ಶಾಸಕ ಮುಂದಾಗಬೇಕು ಎಂದರು.

ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಶಾಸಕ ವೆಂಕಟರಾವ ನಾಡಗೌಡ ಮತ್ತೊಮ್ಮ ಸಚಿವರಾಗುವ ವಿಶ್ವಾಸವಿದೆ ಎಂದರು. ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ಮಸ್ಕಿಯ ವರರುದ್ರಮುನಿ ಶಿವಾಚಾರ್ಯರು, ಗೊರೇಬಾಳ ಸಿದ್ದಯ್ಯ ತಾತ, ವಿಶ್ವನಾಥಸ್ವಾಮಿ ಪಗಡದಿನ್ನಿ, ತುರ್ವಿಹಾಳ ಅಮರಗುಂಡಯ್ಯ ಶಿವಾಚಾರ್ಯರು, ಒಳಬಳ್ಳಾರಿಯ ಅಭಿನವ ಸದಾಶಿವ ದೇವರು, ವೆಂಕಟಗಿರಿ ಕ್ಯಾಂಪ್‌ನ ಸದಾನಂದ ಶರಣರು, ಜೆಡಿಎಸ್ ಪ್ರಮುಖರಾದ ಬಸವರಾಜ ನಾಡಗೌಡ, ಬಿ.ಹರ್ಷ, ಸತ್ಯನಾರಾಯಣ, ನಾಗೇಶ ಹಂಚಿನಾಳಕ್ಯಾಂಪ್, ವೆಂಕಟೇಶ ನಂಜಲದಿನ್ನಿ, ಅಶೋಕಗೌಡ ಗದ್ರಟಗಿ, ಧರ್ಮನಗೌಡ ಮಲ್ಕಾಪುರ, ಚಂದ್ರಯ್ಯಸ್ವಾಮಿ ಮುಕ್ಕುಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net