

ಸಿಂಧನೂರು: ಗದ್ರಟಗಿ ಗ್ರಾಮದ ಆರಾಧ್ಯ ದೇವತೆ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ಮಾ.30 ರಂದು ನಡೆಯಲಿದೆ.
ಬೆಳಗ್ಗೆ 7.30 ಕ್ಕೆ ದೇವಿಗೆ ಉಡಿ ತುಂಬುವುದು, ಧ್ವಜಾರೋಹಣ, ಕಳಸಾರೋಹಣ, 8 ಗಂಟೆಗೆ ಉತ್ಸವ, ನಂತರ ಸಾಮೂಹಿಕ ವಿವಾಹ ನಡೆಯಲಿದ್ದು ಸಂಜೆ 4 ಗಂಟೆಯಿಂದ ಪಲ್ಲಕ್ಕಿ ಉತ್ಸವ ಹೊರಡುವುದು. ಸಂಜೆ 5 ಗಂಟೆಗೆ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೆರಲಿದೆ. ಏ. 1 ರಂದು ಕಡುಬಿನ ಕಾಳಗ ನಡೆಯಲಿದ್ದು, ಶ್ರೀ ಮಲ್ಲಿಕಾರ್ಜುನ ಟ್ರೇಡಿಂಗ್ ಕಂಪನಿಯ ಮಲ್ಲನಗೌಡ ಕಾನಿಹಾಳ ಸಹೋದರು ದಾಸೋಹ ಸೇವೆ ಏರ್ಪಡಿಸಿದ್ದಾರೆೆ. ಮಾ.30 ಮತ್ತು ಏ.1 ರಂದು ’ಸೇಡಿಗಾಗಿ ಸಿಡಿದೆದ್ದ ಶಿವನಾಗ’ ಅರ್ಥಾತ್ ಸಿಡಿದೆದ್ದ ಸಹೋದರು ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.