ಸಿಂದಗಿ ಕ್ಷೇತ್ರದ ಅಭಿವೃದ್ಧಿಗೆ ಜನತೆ ಕೈಜೋಡಿಸಲಿ

Sindagi, Tamba, Gavisiddheshwar Mukti Mandir, MLA Nidhi, Ashoka Managuli, Diwali, MC Managuli,
ತಾಂಬಾ ಗ್ರಾಮದ ಗವಿಸಿದ್ಧೇಶ್ವರ ದೇವರ ಮುಕ್ತಿ ಮಂದಿರದಲ್ಲಿ ಶಾಸಕ ಅಶೋಕ ಮನಗೂಳಿ ಪೂಜೆ ಸಲ್ಲಿಸಿದರು. ಜೆ.ಆರ್.ಪೂಜಾರಿ, ಎಂ.ಬಿ.ಪೂಜಾರಿ, ಎಸ್.ಎಸ್.ಹಿರೇಕುರುಬರ, ಅಪ್ಪಣ್ಣ ಕಲ್ಲೂರ ಇತರರಿದ್ದರು.
Published on

ತಾಂಬಾ: ಗ್ರಾಮದ ಗವಿಸಿದ್ಧೇಶ್ವರ ಮುಕ್ತಿ ಮಂದಿರಕ್ಕೆ ಶಾಸಕರ ನಿಧಿಯಿಂದ 25 ಲಕ್ಷ ರೂ. ನೀಡುವುದಾಗಿ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ದೀಪಾವಳಿ ಅಮಾವಾಸ್ಯೆ ದಿನ ಲೋಕ ಕಲ್ಯಾಣಕಾಗಿ ಗವಿಸಿದ್ಧೇಶ್ವರ ಮುಕ್ತಿ ಮಂದಿರದಲ್ಲಿ ಉಪವಾಸ ವ್ರತದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಾಲುಮತ ಸಮಾಜದ ಜನ ನನ್ನ ಮೇಲಿಟ್ಟಿರುವ ಪ್ರೀತಿಗೆ ಬೆರಗಾಗಿದ್ದೇನೆ. ಅವರ ಋಣ ಎಂದಿಗೂ ಮರೆಯಲ್ಲ, ನನ್ನ ಕೈಲಾದಮಟ್ಟಿಗೆ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇನೆ. ಸಿಂದಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ನನ್ನ ಕನಸಿಗೆ ಹಾಲುಮತ ಸಮಾಜದ ಜನತೆ ಕೈಜೋಡಿಸಬೇಕು ಎಂದರು.

ಭಂಡಾರ (ಪ್ರಸಾದ) ಕೇವಲ ಹಳದಿಯ ಸಂಕೇತವಷ್ಟೇಯಲ್ಲ ಅದು ಹಳದಿಯ ಬಂಗಾರದಂತಿರುವ ಸತ್ಯದ ಸಂಕೇತ. ಹಾಲಿನಂತೆ ಪರಿಶುದ್ಧವಾಗಿರುವ ಹಾಲುಮತ ಸಮಾಜಕ್ಕೆ ನಮ್ಮ ತಂದೆ ಎಂ.ಸಿ.ಮನಗೂಳಿ ಅವರು ಸಾಕಷ್ಟು ಸ್ಥಾನಮಾನ ನೀಡಿದ್ದಾರೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಗವಿಸಿದ್ಧೇಶ್ವರ ದೇವರು ಹಾಗೂ ಮಹಾಲಕ್ಷ್ಮೀ ದೇವಿಯ ಪಲ್ಲಕ್ಕಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯವಾಗಿ ಮೆರವಣಿಗೆ ಮಾಡಲಾಯಿತು.

ಉಪವಾಸ ವ್ರತಾಚರಣೆ ಮಾಡಿದ ಹಿಂದು- ಮುಸ್ಲಿಂ ಸಮುದಾಯದ ಅಪಾರ ಭಕ್ತರಿಗೆ ಬಾಳೆಹಣ್ಣು, ಸಜ್ಜೆಗಡುಬು, ಅಂಬಲಿ, ಸಜ್ಜಕವನ್ನು ಪ್ರಸಾದವಾಗಿ ವಿತರಿಸಲಾಯಿತು.

ಜೆ.ಆರ್.ಪೂಜಾರಿ, ಎಂ.ಬಿ.ಪೂಜಾರಿ, ಎಸ್.ಎಸ್.ಹಿರೇಕುರುಬರ, ಅಪ್ಪಣ್ಣ ಕಲ್ಲೂರ, ಪರಸು ಬಿಸನಾಳ, ರಾಯಗೊಂಡ ಪೂಜಾರಿ, ಅಮರ ವಸದ, ಜಕ್ಕಪ್ಪ ಹತ್ತಳ್ಳಿ, ಎಂ.ಎಸ್.ಕನ್ನುರ, ಬಸವರಾಜ ರೊಟ್ಟಿ, ಚಂದ್ರಮ ಮೂಲಿಮನಿ, ಪುಟ್ಟುಗೌಡ ಪಾಟೀಲ, ಭೂಸಪ್ಪ ಪೂಜಾರಿ, ರೇವಣಸಿದ್ದ ಶಿವಣಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net