ರೋಗಿಗಳ ಸೇವೆಗೆ ಮುಂದಾಗಿ

VMS 31-2
Published on

ವಿಜಯಪುರ: ಕರೊನಾ ಕಾಲದಲ್ಲಿ ರೋಗಿ ಹಾಗೂ ವೈದ್ಯರ ನಡುವಿನ ಅಂತರ ಹೆಚ್ಚಾಗಿದೆ. ಕರೊನಾದಿಂದ ಜನ ಭಯಭೀತರಾಗಿದ್ದಾರೆ. ಅದಕ್ಕಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ರೋಗಿಗಳ ಸೇವೆಗೆ ಮುಂದಾಗಬೇಕೆಂದು ವಿಜಯಪುರದ ಕಿಡ್ನಿ ಕೇರ್ ಆಸ್ಪತ್ರೆ ವೈದ್ಯ ಡಾ.ಸುರೇಶ ಕಾಗಲಕರ ರೆಡ್ಡಿ ಹೇಳಿದರು.
ಸಿಂದಗಿ ಪಟ್ಟಣದ ಶಾಂತವೀರ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕರೊನಾ ಮಾರಿಯಿಂದ ಸಾಕಷ್ಟು ರೋಗಿಗಳು ಭಯದಲ್ಲಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇಂತಹ ಶಿಬಿರಗಳನ್ನು ಹಮ್ಮಿಕೊಂಡು ರೋಗಿಗಳಿಗೆ ನೆರವಾಗಬೇಕು. ತಾವು ಪ್ರತಿ ಭಾನುವಾರ ಸಿಂದಗಿ ಪಟ್ಟಣಕ್ಕೆ ಭೇಟಿ ನೀಡಿ ರೋಗಿಗಳ ಸೇವೆ ಮಾಡುವುದಾಗಿ ಭರವಸೆ ನೀಡಿದರು.
ಡಾ. ಅಶೋಕ ಪೂಜೇರಿ, ರಾಹುಲ್ ಪಾಟೀಲ, ಮಹಾದೇವ ಕಾಗಲಕರ, ಸಿದ್ದು ಉಮಲನೂರ, ಸಿದ್ದು ನಾಯ್ಕೋಡಿ, ಲಕ್ಷ್ಮಿಬಾಯಿ ಬೊಮ್ಮನಳ್ಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net