ಲಾರಿ ಹಾಯ್ದು ವ್ಯಕ್ತಿ ಸಾವು

Death
Published on

ಸಿಂದಗಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ಚಿಕ್ಕಸಿಂದಗಿ ಬೈಪಾಸ್ ಬಳಿ ಲಾರಿ ಹಾಯ್ದು ಪಾದಚಾರಿಯೊಬ್ಬರು ಅಸುನೀಗಿದ್ದಾರೆ.
ಸಿಂದಗಿ ಪಟ್ಟಣದ ನಿವಾಸಿ ಚಂದ್ರಕಾಂತ ಶಿವಶಂಕರ ಹರನಾಳ (34) ಎಂಬುವವರೇ ಮೃತ ದುರ್ದೈವಿ. ಕಲಬುರಗಿಯಿಂದ ವಿಜಯಪುರ ಕಡೆಗೆ ಹೊರಟಿದ್ದ ಲಾರಿಯು ಚಿಕ್ಕಸಿಂದಗಿ ಬಳಿಯಲ್ಲಿ ಸೋಮವಾರ ತಡರಾತ್ರಿ ಹೆದ್ದಾರಿ ದಾಟುತ್ತಿದ್ದ ಚಂದ್ರಕಾಂತನಿಗೆ ಡಿಕ್ಕಿಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net