ಶಾಲೆ ಕೋಣೆ ನಿರ್ಮಾಣಕ್ಕೆ 26.75 ಲಕ್ಷ ರೂ. ಅನುದಾನ

SND 30-1
Published on

ಸಿಂದಗಿ: ಮತಕ್ಷೇತ್ರದ ಎರಡು ಗ್ರಾಮಗಳ ಮೂರು ಶಾಲೆ ಕೊಠಡಿಗಳ ನಿರ್ಮಾಣಕ್ಕೆ 26.75 ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದು ಶಾಸಕ ಎಂ.ಸಿ. ಮನಗೂಳಿ ಹೇಳಿದರು.

ತಾಲೂಕಿನ ನಾಗಾವಿ ಬಿ.ಕೆ. ಗ್ರಾಮದಲ್ಲಿ ಶುಕ್ರವಾರ 2019-20ನೇ ಸಾಲಿನ ಪಂಚಾಯತ್‌ರಾಜ್ ಇಲಾಖೆ ವಿಜಯಪುರ ವಿಭಾಗದ ಅನುದಾನದಡಿ ನೂತನ ಶಾಲೆ ಕೊಠಡಿಗಳ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. 15.75 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂತನ ಎರಡು ಕೋಣೆಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ, ಯರಗಲ್ ಬಿ.ಕೆ. ಗ್ರಾಮದಲ್ಲಿಯೂ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಒಂದು ಕೋಣೆಗೆ 11 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು.

ಗ್ರಾಮದ ಪ್ರಜ್ಞಾವಂತರು ಈ ಕಾಮಗಾರಿಯ ಬಗ್ಗೆ ನಿಗಾವಹಿಸಿ, ಗುಣಮಟ್ಟದ ಬಗ್ಗೆ ಖಾತ್ರಿ ಪಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಲಾಖೆಯ ಇಂಜಿನಿಯರ್ ಅಶೋಕ್ ಪಾಟೀಲ, ನಾಗಾವಿ ಗ್ರಾಮದ ಮುಖಂಡರಾದ ಗುರಣ್ಣಗೌಡ ಬಿರಾದಾರ, ತಮ್ಮನಗೌಡ ಪಾಟೀಲ, ಕಲ್ಯಾಣರಾಯಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ, ಶಾಂತಗೌಡ ಬಿರಾದಾರ (ಗಬಸಾವಳಗಿ) ಗುತ್ತಿಗೆದಾರರಾದ ಶಂಕರ ಸಾಥಿಹಾಳ್, ಜಿಲ್ಲಾ ಜೆಡಿಎಸ್ ಮುಖಂಡ ಅರವಿಂದ್ ಹಂಗರಗಿ, ಯರಗಲ್ಲ ಬಿ.ಕೆ. ಗ್ರಾಮದ ಎಚ್. ಕೆ. ನದ್ಾ, ಸಾಯಿ ಪಟೇಲ, ಶ್ರೀಶೈಲ ಬಾಲಪ್ಪಗೋಳ, ಅಣ್ಣಾರಾಯ್ ಕಡಲಗೊಂಡ, ಗುಂಡಪ್ಪ ಮಲಘಾಣ, ಶಿವಪ್ಪಗೌಡ ಬಗಲಿ, ಬಸವರಾಜ ಉಣ್ಣಿಜಾಡಿ ಮತ್ತಿರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net