ಬಿಜೆಪಿ ಯುವ ಮೋರ್ಚಾದಿಂದ ಸ್ವಚ್ಛತಾ ಅಭಿಯಾನ

SND-29-1
Published on

ಸಿಂದಗಿ: ತಾಲೂಕಿನ ಹಂದಿಗನೂರ ಗ್ರಾಮದ ಚಿರಲಿಂಗೇಶ್ವರ ಮಠದ ಆವರಣದಲ್ಲಿ ತಾಲೂಕು ಬಿಜೆಪಿ ಮಂಡಲದ ಯುವ ಮೋರ್ಚಾ ಕಾರ್ಯಕರ್ತರು ಭಾನುವಾರ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದರು.

ಅಧ್ಯಕ್ಷ ಮಲ್ಲಿಕಾರ್ಜುನ ಬಗಲಿ ಮಾತನಾಡಿ, ದೇಶ ಸೇವೆ ಎಲ್ಲರಿಗೂ ಲಭಿಸಲ್ಲ. ಅಂತಹ ಅವಕಾಶ ಲಭಿಸಬೇಕೆಂದರೆ ನಾವು ಹೆಮ್ಮೆಯ ಪ್ರಧಾನಿ ಮೋದಿ ಅವರ ಸ್ವಚ್ಛತಾ ಅಭಿಯಾನಕ್ಕೆ ಅಣಿಯಾಗಬೇಕು. ಪ್ರತಿ ಭಾನುವಾರ ತಾಲೂಕಿನ ಪ್ರತಿ ಗ್ರಾಮದಲ್ಲಿ ಯುವ ಮೋರ್ಚಾ ವತಿಯಿಂದ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿರುವುದಾಗಿ ಹೇಳಿದರು.

ಯುವ ಮೋರ್ಚಾದ ಕಾರ್ಯದರ್ಶಿ ಎಸ್.ಆರ್. ಪಾಟೀಲ ಮತ್ತು ರೈತ ಮೋರ್ಚಾದ ಅಶೋಕ ಅಂಚೆಗಾವಿ ಮಾತನಾಡಿ, ಸ್ವಚ್ಛತೆಯಿಂದಲೇ ಆರೋಗ್ಯ ಭಾಗ್ಯ ಪಡೆದುಕೊಳ್ಳಬಹುದು. ಸ್ವಚ್ಛತೆಗಿರುವ ತಾಕತ್ತಿನ ಬಗ್ಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಂಡ ಕನಸಿಗೆ ಇದೀಗ ಪ್ರಧಾನಿ ಮೋದಿ ಅವರು ನೀರೆರೆದು ಪೋಷಿಸುತ್ತಿದ್ದಾರೆ. ಇಂತಹ ಕಾರ್ಯವನ್ನು ನಾವು ಊರು, ಕೇರಿ, ಮನೆ, ಮಠ, ದೇವಾಲಯಗಳನ್ನು ಸ್ವಚ್ಛತಾ ಜಾಗೃತಿ ಮೂಲಕ ಸುಂದರ ಗ್ರಾಮೀಣ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗೋಣ ಎಂದರು.

ಬಿಜೆಪಿ ಮಂಡಲ ಮೋರ್ಚಾದ ಅರವಿಂದ ಹಡಗಲಿ, ಭೋಜರಾಜ ದೇಸಾಯಿ, ಅರುಣ ರೆಡ್ಡಿ, ಮಂಜುನಾಥ ಹಡಪದ, ಶಿವು ಮಣೂರ, ಅಡಿವೆಪ್ಪ ಅಡವಿ, ನಿಂಗು ಬಡಿಗೇರ, ದೇವಿಂದ್ರ ಬೊಮ್ಮನಜೋಗಿ, ಲಕ್ಷ್ಮಣ ಮಸಳಿ, ಶ್ರೀಶೈಲ ಕಲಬುರಗಿ, ಗುರು ಹಿರೇಮಠ ಸೇರಿದಂತೆ ಗ್ರಾಮದ ಯುವಕರು ಹಾಗೂ ಹಿರಿಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net