250 ಕ್ವಿಂಟಾಲ್ ಪಡಿತರ ಅಕ್ಕಿ ವಶ

SND-22-2
Published on

ಸಿಂದಗಿ: ಪಟ್ಟಣದ ಕಲಕೇರಿ ರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಚೀಲಗಳನ್ನು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ದಲಿತ ಸೇನೆ ಕಾರ್ಯಕರ್ತರಿಂದ ಖಚಿತ ಮಾಹಿತಿ ಪಡೆದ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಲಾರಿ ಮೇಲೆ ದಿಢೀರ್ ದಾಳಿ ನಡೆಸಿ ಅಂದಾಜು 50 ಕೆಜಿ ತೂಕದ 502 ಅಕ್ಕಿಯ ಚೀಲಗಳನ್ನು ವಶಕ್ಕೆ ಪಡೆದರು. ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದು, ಅಕ್ಕಿ ಚೀಲಗಳನ್ನು ಪಟ್ಟಣದ ಆಹಾರ ಸಂಗ್ರಹಣಾಗಾರಕ್ಕೆ ಸ್ಥಳಾಂತರಿಸಲಾಗಿದೆ.

ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ಆಹಾರ ಶಿರಸ್ತೇದಾರ ರವಿ ರಾಠೋಡ, ಆಹಾರ ನಿರೀಕ್ಷಕ ಅಮೋಘಿ ದಳವಾಯಿ, ಠಾಣಾಧಿಕಾರಿ ಸಂಗಮೇಶ ಹೊಸಮನಿ, ದಲಿತ ಸೇನೆಯ ಶಿವಾನಂದ ಆಲಮೇಲ, ಸಂತೋಷ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net