ರೈತರು ಸರ್ಕಾರದ ಸವಲತ್ತು ಬಳಸಿಕೊಳ್ಳಲಿ

SND 03
Published on

ಸಿಂದಗಿ: ಬೆಂಬಲ ಬೆಲೆಯಡಿ ತೊಗರಿ ಖರೀದಿಸುವ ಕೇಂದ್ರಗಳಿಗೆ ರೈತರು ತಮ್ಮ ಉತ್ಪನ್ನ ಕಳುಹಿಸಿ ಸರ್ಕಾರದ ಸವಲತ್ತು ಪಡೆದುಕೊಳ್ಳಬೇಕೆಂದು ಶಾಸಕ ರಮೇಶ ಭೂಸನೂರ ಹೇಳಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾನುವಾರ ಚೆನ್ನವೀರ ಶಿವಾಚಾರ್ಯರ ರೈತ ಉತ್ಪಾದಕ ಕೇಂದ್ರದಲ್ಲಿ ತೆರೆದ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಡಿ.31ರಂದು ಖರೀದಿ ಕೇಂದ್ರಕ್ಕೆ ಸರ್ಕಾರ ಅವಕಾಶ ನೀಡಿದ್ದು, ಪ್ರತಿ ಕ್ವಿಂಟಲ್‌ಗೆ 6300 ರೂ. ಕೊಡಲಾಗುತ್ತಿದೆ ಎಂದರು.

ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಲಿಂಬೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಅಲ್ಲಾಪುರ, ಎಪಿಎಂಸಿ ಅಧ್ಯಕ್ಷ ಸಿದ್ದಣ್ಣ ಹಿರೇಕುರಬರ, ಪ್ರಕಾಶ ಹಿರೇಕುರಬರ, ಶೈಲಜಾ ಸ್ಥಾವರಮಠ, ಮಹಾದೇವ ಅಂಬಲಿ, ರಾಜಶೇಖರ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net