

ಸಿಂದಗಿ: ವಿದ್ಯಾರ್ಥಿ ಜೀವನಕ್ಕೆ ಓದು ತುಂಬಾ ಅವಶ್ಯಕ. ಇಂದು ನೀವೆಲ್ಲರೂ ಪರಿಶ್ರಮದಿಂದ ಅಧ್ಯಯನ ಮಾಡಿದರೆ, ಬದುಕು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತದೆ ಎಂದು ಬೆಂಗಳೂರಿನ ಸದರ್ನ ಇಲೆಕ್ಟ್ರಿಕಲ್ ಕಂಪನಿ ನಿರ್ದೇಶಕಿ ನೀಲಮ್ಮ ಹಿರೇಮಠ ಹೇಳಿದರು.
ಪಟ್ಟಣದ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಪ.ಪೂ.ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳ ಸನ್ಮಾನ, ಪಠ್ಯಪೂರಕ ಚಟುವಟಿಕೆ, ರೋವರ್ ಮತ್ತು ರೇಂಜರ್, ಭಾರತ ಸೇವಾದಳ, ಮತದಾರರ ಸಾಕ್ಷರತಾ ಸಂಘ, ಎನ್.ಎಸ್.ಎಸ್.ಘಟಕಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಓದು ಜೀವನ ಸಂಕಲ್ಪವಾಗಬೇಕು. ನಮಗೆ ಮನೆ ಜೀವನೋಪಾಯ ಹೇಳಿಕೊಟ್ಟರೆ, ಮಠ ಸಂಸ್ಕಾರವನ್ನು ಕಲಿಸುತ್ತದೆ. ಸಿಂದಗಿ ಸಾರಂಗಮಠ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯದ ಜತೆಗೆ ಶಿಕ್ಷಣ ನೀಡಿದೆ. ಇಂತಹ ಮಠದ ಸಂಸ್ಥೆಯಲ್ಲಿ ಓದಿ ಬೆಳೆದ ನನಗೆ ಶಿಸ್ತು ಮತ್ತು ಸಮಾಜದ ಉನ್ನತ ಗೌರವ ದೊರತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಹೆತ್ತವರನ್ನು ದೇವರಂತೆ ಕಾಣಬೇಕು. ಪಿಯು ಹಂತದಲ್ಲಿ ಉತ್ತಮ ಹವ್ಯಾಸಗಳನ್ನಿಟ್ಟುಕೊಂಡು ಶೈಕ್ಷಣಿಕ ಸಾಧನೆ ಮಾಡಬೇಕು ಎಂದರು.
ಸದರ್ನ ಇಲೆಕ್ಟ್ರಿಕಲ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮಡಿವಾಳಯ್ಯ ಹಿರೇಮಠ, ಸಂಸ್ಥೆಯ ನಿರ್ದೇಶಕ ಸಂಘವಿ ನೆಹರೂಜಿ ಪೋರವಾಲ, ಹ.ಮ.ಪೂಜಾರ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎಚ್.ಸೋಮಾಪೂರ ಹಾಗೂ 2023ನೇ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವಿಮಲಕಾಂತ ಪಾಟೀಲ ಮಾತನಾಡಿದರು. ಚರ್ಚಾಕೂಟ ವಿಭಾಗದ ಕಾರ್ಯಾಧ್ಯಕ್ಷ ಪ್ರಸನ್ನ ಜೋಗೂರ ಸ್ವಾಗತಿಸಿದರು. ಮಾರುತಿ ತಳವಾರ ವಂದಿಸಿದರು.
ಆಡಳಿತಾಧಿಕಾರಿ ಬಿ.ಜಿ.ಮಠ, ಬಿ.ಎಂ.ಗೋಟಕಿಂಡಿಮಠ, ಚನ್ನಪ್ಪ ಕಟ್ಟಿ, ಎಂ.ಎಂ.ಪಡಶೆಟ್ಟಿ, ಬಿ.ಎಂ.ಸಿಂಗನಳ್ಳಿ, ಪಿ.ವಿ.ಮಹಲಿನಮಠ, ಎನ್.ಬಿ.ಪೂಜಾರಿ, ಎಸ್.ಜಿ.ಮಾರ್ಸನಳ್ಳಿ, ಶಿವಶರಣ ಬೂದಿಹಾಳ, ಎಸ್.ಎಚ್.ಜಾಧವ, ರಾಹುಲ ನಾರಾಯಣಕರ್, ಸಂಗಮೇಶ ಚಾವರ, ರೋಹಿತ ಸುಲ್ಪಿ, ಎನ್.ಎಂ.ಶೆಳ್ಳಗಿ, ಸುನೀಲ ಪಾಟೀಲ, ಎಂ.ಐ.ಮುಜಾವರ್, ವಿ.ಕೆ.ಹಿರೇಮಠ, ಐ.ಎಸ್.ಶಿವಸಿಂಪಿಗೇರ, ಎಸ್.ಎಸ್.ತಾಳಿಕೋಟಿ, ಶರಣು ಜೋಗೂರ, ವಿ.ಪಿ.ನಂದಿಕೋಲ, ಸುಭಾಸ ಹೊಸಮನಿ, ಆರ್.ಎಂ.ಕೊಳ್ಳೂರೆ, ನೀಲಕಂಠ ಮೇತ್ರಿ, ಅಡಿವೆಪ್ಪ ದಸ್ಮಾ, ಎ.ಬಿ.ಬಮ್ಮಣ್ಣಿ, ಭಾಗಮ್ಮ ಕೋರಿ ಇತರರಿದ್ದರು.