ಬಡ ವರ್ಗಕ್ಕೆ ಸಹಕಾರದ ಭರವಸೆ ನೀಡಿದ ಭೂಸನೂರ

SND-2-2
Published on

ಸಿಂದಗಿ: ಕರೊನಾದಿಂದ ಸಂಕಷ್ಟದಲ್ಲಿರುವ ಮತಕ್ಷೇತ್ರದ ಪ್ರತಿಯೊಂದು ಬಡ ಕುಟುಂಬಕ್ಕೂ ಆಹಾರ ಧಾನ್ಯ ವಿತರಿಸಲಾಗುತ್ತಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಬುಧವಾರ ಬಡವರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿ ಅವರು ಮಾತನಾಡಿದರು.

ಇಡೀ ಸಮಾಜವೇ ಮಮ್ಮಲ ಮರಗುವಂತೆ ಮಾಡಿರುವ ಕರೊನಾ ಅದೆಷ್ಟೋ ಬದುಕುಗಳಿಗೆ ನಿಸ್ಸಾಹಯಕತೆ ತಂದೊಡ್ಡಿದೆ. ಕ್ಷೇತ್ರದ ಋಣ ತೀರಿಸಲು ಇದೊಂದು ಸದಾವಕಾಶ ಬಂದಿದ್ದು, ಕರೊನಾ ಕಂಟಕ ಪ್ರಾರಂಭವಾದಾಗಿನಿಂದಲೂ ಕ್ಷೇತ್ರದ ಜನರ ಮಧ್ಯೆ ಇದ್ದು, ಅವರ ನೋವುಗಳಲ್ಲಿ ಭಾಗಿಯಾಗಿದ್ದೇನೆ ಎಂದರು.

ಇದೇ ವೇಳೆ ನಗರ ವಲಯದ ಸಾವಿರಾರು ಬಡ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ನೀಡಿದರು. ಬಿಜೆಪಿ ಯುವ ಮುಖಂಡ ಸಂತೋಷಗೌಡ ಪಾಟೀಲ ಡಂಬಳ, ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಮುಖಂಡರಾದ ಗುರು ತಳವಾರ, ಶಿವಾನಂದ ಆಲಮೇಲ, ಸುದರ್ಶನ ಜಂಗಾಣಿ, ರಮೇಶ ಚಿನ್ನಾಕರ, ಶ್ರೀಶೈಲಗೌಡ ಬಿರಾದಾರ, ಸುನಂದಾ ಯಂಪೋರೆ, ಡಾ. ನಾಯ್ಕೋಡಿ, ಹೊನ್ನಳ್ಳಿ ಗ್ರಾಪಂ ಸದಸ್ಯೆ ಯಾಶ್ಮೀನ್ ನಾಯ್ಕೋಡಿ, ಸಿದ್ರಾಮ ಪೂಜಾರಿ, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net