ಜಿಪಂ ಅಧ್ಯಕ್ಷೆ ಕಳ್ಳಿಮನಿಗೆ ಅದ್ದೂರಿ ಸ್ವಾಗತ

SND-18-02
Published on

ಸಿಂದಗಿ: ತಾಲೂಕಿನ ಬೋರಗಿ ಗ್ರಾಮದ ದಲಿತ ಕೇರಿ ವಾಸ್ತವ್ಯಕ್ಕೆ ಆಗಮಿಸಿದ ವಿಜಯಪುರ ಜಿಪಂ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ ಅವರನ್ನು ಮುತ್ತೈದೆಯರ ಆರತಿ, ಕುಂಭ-ಕಳಸ, ಡೊಳ್ಳಿನ ವಾಲಗದ ಮೆರವಣಿಗೆ ಮೂಲಕ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.

ಬೋರಗಿ ಗ್ರಾಮಕ್ಕೆ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರು ಮೂಲಭೂತ ಸಮಸ್ಯೆ ಮತ್ತು ಸೌಕರ್ಯಗಳ ಪರಿಶೀಲನೆಗಾಗಿ ದಲಿತ ಕೇರಿಯಲ್ಲಿ ವಾಸ್ತವ್ಯ ಹಮ್ಮಿಕೊಂಡಿದ್ದರು. ಈ ವೇಳೆ ಗುರುವಾರ ಸಂಜೆ ಗ್ರಾಮಸ್ಥರೆಲ್ಲರೂ ಅಧ್ಯಕ್ಷೆ ಕಳ್ಳಿಮನಿ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದರು.

ಗ್ರಾಮಸ್ಥರ ಬೇಡಿಕೆಗಳನ್ನು ಹಾಗೂ ದಲಿತ ಕೇರಿಯ ಕುಂದುಕೊರತೆಗಳನ್ನು ಆಲಿಸಿ ತಕ್ಷಣವೇ ಸ್ಥಳದಲ್ಲಿದ್ದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ, ಸಮಸ್ಯೆಗಳನ್ನು ಪಟ್ಟಿ ಮಾಡಿ ಶೀಘ್ರ ಪರಿಹರಿಸಲು ತಿಳಿಸಿದರು.

ಅಧಿಕಾರಿಗಳು ಗ್ರಾಮಸ್ಥರ ಹಾಗೂ ಕೇರಿಯ ಮಹಿಳೆಯರ ಕುಂದುಕೊರತೆಗಳನ್ನು ಆಲಿಸಿ, ಪಟ್ಟಿ ಮಾಡಿ ಅಧ್ಯಕ್ಷರ ಸೂಚನೆ ಮೇರೆಗೆ ಹಂತಹಂತವಾಗಿ ಪರಿಹಾರ ಕಂಡಕೊಳ್ಳುವುದಾಗಿ ಭರವಸೆ ನೀಡಿದರು.

ತಾಪಂ ಅಧ್ಯಕ್ಷೆ ಸುನಂದಾ ಸಾಲಕ್ಕಿ, ಮುಖಂಡರಾದ ಸೋಮನಾಥ ಕಳ್ಳಿಮನಿ, ಮಲ್ಲು ಸಾವಳಸಂಗ, ಗ್ರಾಪಂ ಅಧ್ಯಕ್ಷೆ ಸುನೀತಾ ನಾಯ್ಕೋಡಿ, ಉಪಾಧ್ಯಕ್ಷ ಸಿದ್ಧಲಿಂಗ ಗುಂಡಾಪುರ ಸುಭಾಸ ಜಾಲವಾದಿ, ಮಂಜುನಾಥ ನಾಯ್ಕೋಡಿ, ಬಸವರಾಜ ಚಾವರ, ಬನ್ನೆಪ್ಪ ಜೋಗಿ, ಜಿ.ಎಸ್. ಹೊಸಗೌಡರ, ಸಿದ್ದು ಕೆರಿಗೊಂಡ, ಯಲ್ಲು ಕೊಕಟನೂರ, ಮಾಳಿಂಗರಾಯ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net