ಸಂಭ್ರಮದ ಗುರು ಗಂಗಾಧರೇಶ್ವರ ಜಾತ್ರೆ

SND 15-1
Published on

ಸಿಂದಗಿ: ತಾಲೂಕಿನ ಆಹೇರಿ ಗ್ರಾಮದಲ್ಲಿನ ಗಂಗಾಧರೇಶ್ವರರ ಜಾತ್ರೆ ಸಾಕ್ಷಾತ್ ಮಲ್ಲಯ್ಯನ ಜಾತ್ರೆಯಂತೆಯೇ ಸಂಕ್ರಮಣದ ಶುಭ ದಿನ ಬುಧವಾರ ಭಕ್ತರ ದರ್ಶನ ಭಾಗ್ಯದಿಂದ ಜಾತ್ರಾ ಸಂಭ್ರಮ ಇಮ್ಮಡಿಗೊಳಿಸಿತು.
ಜಾತ್ರೆಯಲ್ಲಿ ದೇವರಗುಡಿಗೆ ಬಂದ ಗುರು ಗಂಗಾಧರೇಶ್ವರರ ಪಲ್ಲಕ್ಕಿಯನ್ನು ಜಯಘೋಷಗಳೊಂದಿಗೆ ಸ್ವಾಗತಿಸಲಾಯಿತು. ನಂತರ ಅಗ್ಗಿ ಹಾಯುವ ಕಾರ್ಯ ನಡೆಯಿತು. ದೇವಸ್ಥಾನದ ಆವರಣದಲ್ಲಿ ಎತ್ತರದ ಕಟ್ಟೆ ಮೇಲೆ ಚರಗ ಚೆಲ್ಲಿ ರೈತನ ಸಮೃದ್ಧಿಗೆ ಪ್ರಾರ್ಥಿಸಲಾಯಿತು.
ಗುರು-ಶಿಷ್ಯರ ಬಾಂಧವ್ಯಕ್ಕೆ ಹಣೆ ಮಣೆದ ಸಾವಿರಾರು ಭಕ್ತಗಣ, ಜಾತ್ರಾ ವಿಶೇಷವಾದ ಭಜ್ಜಿ (ತರಹೇವೇರಿ ಕಾಳು ಮತ್ತು ಪಲ್ಲೆಗಳಿಂದ ಸಿದ್ಧಪಡಿಸಿದ ಖಾದ್ಯ) ರುಚಿಗೆ ಬಾಯಿಚಪ್ಪರಿಸಿ ಸಮಾನತೆಯ ಸಾರ ಅರಿತು, ಏಳು ಕೋಟಿ.. ಏಳು ಕೋಟಿಗೆ ಎಂದು ಉೇ ಮಾಡಿ ಗಂಗಾಧರೇಶ್ವರ ಕೃಪೆಗೆ ಪಾತ್ರಾರಾದರು.
ಕಮಿಟಿಯ ಸಿದ್ದಣ್ಣಸಾಹುಕಾರ ಚಿಂಚೊಳ್ಳಿ, ಬಸಣ್ಣಸಾಹು ಕಡಗಂಚಿ, ಭಾಗಪ್ಪಗೌಡ ಪಾಟೀಲ, ರಮಜಾನಸಾಬ ದುಮ್ಮದ್ರಿ, ಈರಣ್ಣಗೌಡ ಬಿರಾದಾರ, ಗೌಡಪ್ಪಗೌಡ ಪಾಟೀಲ, ಸಿದ್ಧಾರೂಢ ಕಡಗಂಚಿ ಇತರರು ಜಾತ್ರೆಯ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net