

ಮಡಿಕೇರಿ: ಕೊಡಗಿನ ಅಪರೂಪದ ಬಾಲ ಯೋಗಸಾಧಕಿ ಮದೆನಾಡಿನ ಬಿ.ಕೆ.ಸಿಂಚನಾ ಯೋಗಾಸನದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾಳೆ.
ಬುಧವಾರ ಮದೆನಾಡಿನ ಬಿ.ಜಿ.ಎಸ್ ಶಾಲೆಯಲ್ಲಿ ನಡೆದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಿರ್ಮಿಸುವ ಕಾರ್ಯಕ್ರಮದಲ್ಲಿ ಡಿಂಬಾಸನದ ಬಂಗಿಯಲ್ಲಿ ತನ್ನದೇ ದಾಖಲೆಯನ್ನು ಮುರಿದರು. ಇದೇ ಸಂದರ್ಭ ಉರಬ್ರಾಸನಾ, ಮೃಗಮುಖಾಸನದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದಳು.
ಡಿಂಬಾಸನದಲ್ಲಿ ಒಂದು ನಿಮಿಷಕ್ಕೆ ೧೫ ಮೀಟರ್ ಚಲಿಸಿ ದಾಖಲೆ ನಿರ್ಮಿಸಿದರು. ಉರಬ್ರಾಸನದಲ್ಲಿ ಒಂದು ನಿಮಿಷ ಒಂದೇ ಸ್ಥಿತಿಯಲ್ಲಿರುವುದು ಮತ್ತು ಮೃಗಮುಖಾಸನದಲ್ಲಿ ಒಂದು ನಿಮಿಷ ಏಕಸ್ಥಿತಿಯಲ್ಲಿರುವ ಯೋಗಾಸನವನ್ನು ಸಿಂಚನಾ ಪ್ರದರ್ಶಿಸಿದಳು. ಉರಬ್ರಾಸನಾ ೧ ನಿಮಿಷ ೪ ಸೆಕೆಂಡ್ ಸಾದನೆ ಮಾಡಿದರೆ, ಮೃಗಮುಖಾಸನದಲ್ಲಿ ೧ ನಿಮಿಷ ೪೫ ಸೆಕೆಂಡ್ಸ್‌ನಲ್ಲಿ ಸಾಧನೆ ಮಾಡಿದಳು.