

ಮಡಿಕೇರಿ:
ಕೊಡಗು ಪತ್ರಕರ್ತರ ಸಂಘ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಕೊಡಗಿನ ಯುವ ಯೋಗಪಟು ಮದೆನಾಡಿನ ಸಿಂಚನಾಳ ಯೋಗ ಪ್ರದರ್ಶನವನ್ನು ಗಿನ್ನೀಸ್ ವಿಶ್ವದಾಖಲೆಗೆ ಸೇರ್ಪಡೆ ಮಾಡುವ ಕಾರ್ಯಕ್ರಮ ಜೂ. 21 ರಂದು ಶನಿವಾರ ವಿಶ್ವಯೋಗ ದಿನಾಚರಣೆಯಂದು ಮಡಿಕೇರಿಯಲ್ಲಿ ಆಯೋಜಿಸಲಾಗಿದೆ.
ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ಅಂದು ಸಂಜೆ 6 ಗಂಟೆಗೆ ಮದೆನಾಡಿನ ಬಿಜಿಎಸ್ ಪಬ್ಲಿಕ್ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ಸಿಂಚನಾಳ ಯೋಗಪ್ರದರ್ಶನವನ್ನು ಗಿನ್ನೀಸ್ ದಾಖಲೆಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಸಿಂಚನಾಳಿAದ ಡಿಂಬಾಸನ ಯೋಗ ಆಯೋಜಿಸಲಾಗಿದೆ. 30 ನಿಮಿಷ 5 ಸೆಕೆಂಡ್ ಗಳ ಕಾಲ ಸಿಂಚನಾ ಡಿಂಬಾಸನ ಯೋಗ ಭಂಗಿಯಲ್ಲಿರುವ ಮೂಲಕ ಗಿನ್ನೀಸ್ ವಿಶ್ವದಾಖಲೆ ಮಾಡಲಿದ್ದು ಪರಿಣಿತರು ಈ ಸಂಬAಧಿತ ದಾಖಲೆ ಮಾಡಿಕೊಳ್ಳಲಿದ್ದಾರೆ. ಈ ಮೂಲಕ ಸಿಂಚನಾಳ ಯೋಗ ಪ್ರತಿಭೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಟಿ. ಅನಿಲ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.