ಪ್ರಾಮಾಣಿಕತೆ ಧಾರ್ಮಿಕ ಆಚರಣೆಯ ಮೂಲ ತತ್ವ

Sincerity is the basic principle of religious practice
ನಾಲತವಾಡದಲ್ಲಿ ಶಿರಹಟ್ಟಿ-ಬಾಳೆ ಹೊಸೂರ ಭಾವೈಕ್ಯ ಸಂಸ್ಥಾನ ಪೀಠದ ಜಗದ್ಗುರು ಪಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರವಚನ ನೀಡಿದರು. ಮಾಜಿ ಶಾಸಕ ಎ.ಎಸ್.ಪಾಟೀನ ನಡಹಳ್ಳಿ, ಮುತ್ತು ಅಂಗಡಿ, ನಾನಾಸಾಹೇಬ ದೇಶಮುಖ ಇತರರಿದ್ದರು.
Published on

ನಾಲತವಾಡ: ಪ್ರಾಮಾಣಿಕತೆ ಮತ್ತು ಸಹಾನುಭೂತಿ ಧಾರ್ಮಿಕ ಆಚರಣೆಯ ಮೂಲ ತತ್ವ ಎಂದು ಶಿರಹಟ್ಟಿ-ಬಾಳೆ ಹೊಸೂರ ಭಾವೈಕ್ಯ ಸಂಸ್ಥಾನ ಪೀಠದ ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.

ವೀರೇಶ್ವರ ವಿದ್ಯಾಸಂಸ್ಥೆ ಆವರಣದಲ್ಲಿ ವೀರೇಶ್ವರ ದಂಪತಿಯ 106ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಪ್ರವಚನ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಅಧ್ಯಾತ್ಮವು ಯಾವ ಸಮಯದಲ್ಲಾದರೂ ಹೃದಯದಲ್ಲಿ ಚಿಗುರೊಡೆಯಬಹುದು. ಅದು ನಿತ್ಯವೂ ಬೆಳೆಯುತ್ತಲೇ ಇರುತ್ತದೆ. ಆದರೆ ಅದನ್ನು ಗಮನಿಸಿ ಸ್ವೀಕರಿಸುವವರಿಗೆ ಮಾತ್ರ ಅದರ ಅನುಭವವಾಗುತ್ತದೆ ಎಂದು ಹೇಳಿದರು.

ಮಸಬಿನಾಳದ ವಿರಕ್ತಮಠ ದಾಸೋಹ ಸಂಸ್ಥಾನ ಮಠದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಶ್ರೀಗಳ ಪ್ರವಚನ ನಮ್ಮ ಬದುಕಿಗೆ ದಿಕ್ಸೂಚಿಯಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ವೀರೇಶ್ವರ ಸಂಸ್ಥೆ ಕಾರ್ಯದರ್ಶಿ ಮುತ್ತು ಅಂಗಡಿ ಮಾತನಾಡಿದರು. ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಉದ್ಘಾಟಿಸಿದರು. ನಾನಾಸಾಹೇಬ ದೇಶಮುಖ ಅಧ್ಯಕ್ಷತೆ ವಹಿಸಿದ್ದರು.

ಶಿರಸಿ ಬಣ್ಣದಮಠದ ಶಿವಲಿಂಗ ಶ್ರೀಗಳು, ಮಲಘಾಣದ ಜಡೆಯ ಶಾಂತಲಿಂಗ ಶಿವಾಚಾರ್ಯರು, ಪಡೇಕನೂರದ ಮಲ್ಲಿಕಾರ್ಜುನ ಸ್ವಾಮೀಜಿ, ಕುಂಟೋಜಿ ಹಿರೇಮಠ ಸಂಸ್ಥಾನ ಮಠದ ಗುರುಚನ್ನವೀರ ಸ್ವಾಮೀಜಿ, ಕೊಡೇಕಲ್ಲದ ಶಿವಕುಮಾರ ಸ್ವಾಮೀಜಿ, ಕುಕನೂರದ ಚನ್ನಮಲ್ಲ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪ.ಪಂ.ಅಧ್ಯಕ್ಷೆ ವಿಜಯಲಕ್ಷ್ಮೀ ಇಳಕಲ್, ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಪೃಥ್ವಿರಾಜ ನಾಡಗೌಡ, ಗಂಗಾಧರ ನಾಡಗೌಡ, ಶಂಕರರಾವ ದೇಶಮುಖ, ಗುರುಪ್ರಸಾದ ದೇಶಮುಖ, ಅಬ್ದುಲ್ ಗನಿ ಖಾಜಿ, ಇಬ್ರಾಹಿಂ ಮುಲ್ಲಾ, ಡಾ.ಗುರುಮೂರ್ತಿ ಕಣಕಾಲಮಠ, ಬಳಗಾನೂರದ ಮಂಜುಳಾ ತಾಯಿ, ಚನ್ನಮಲ್ಲ ಸ್ವಾಮೀಜಿ ಉಪಸ್ಥಿತರಿದ್ದರು.

ಶಿವರುದ್ರಯ್ಯ ಕಲಬುರ್ಗಿಮಠ ಪ್ರಾರ್ಥಿಸಿದರು. ಶಶಿ ಬಂಗಾರಿ ಸ್ವಾಗತಿಸಿದರು. ಡಾ.ಡಿ.ಆರ್.ಮಳಖೇಡ ವಂದಿಸಿದರು. ಬಸವರಾಜ ಹಾದಿಮನಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net