ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ

20 RON ANJUMAN
Published on

ರೋಣ: ಮುಸ್ಲಿಂ ಸಮಾಜದ ಏಳಿಗೆಗಾಗಿ ಹಾಗೂ ಅಂಜುಮನ್-ಎ- ಎಸ್ಲಾಂ ಕಮೀಟಿ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಅಂಜುಮನ್ ಇಸ್ಲಾಂ ಕಮೀಟಿ ನೂತನ ಅಧ್ಯಕ್ಷ ಬಾವಸಾಹೇಬ ಬೆಟಗೇರಿ ಭರವಸೆ ನೀಡಿದರು.


ಪಟ್ಟಣದ ಅಂಜುಮನ್ ಪ್ರೌಢಶಾಲೆಯಲ್ಲಿ ಅಂಜುಮನ್-ಎ- ಇಸ್ಲಾಂ ಕಮೀಟಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರು ಮಾತನಾಡಿದರು.


ಸರ್ವರ ವಿಶ್ವಾಸ ಪಡೆದು ಸಂಸ್ಥೆಯ ಬೆಳವಣೆಗೆ ಹಾಗೂ ಅಭಿವೃದ್ದಿಗೆ ಶ್ರಮಿಸುತ್ತೇನೆ. ಸಮಾಜದ ಜನರು ಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು.


ಉಪಾಧ್ಯಕ್ಷ ಮಹ್ಮದ ಗೈಬುಸಾಬ ತರಫದಾರ, ಕಾರ್ಯದರ್ಶಿ ಅಬ್ದುಲ್ ಸೈಯ್ಯದ, ಪೈಜಹ್ಮದ ಕಲಾದಗಿ, ಮಹ್ಮದಯೂಸೂಫ್ ಇಟಗಿ, ಅಬ್ದುಲ್ ಖತೀಬ ಖಲೀಲಹ್ಮದ ರಾಮದುರ್ಗ, ಶಫೀಕ್ ಮೂಗನೂರ, ಬಶೀರಹ್ಮದ ಕೊಪ್ಪಳ, ಮಹ್ಮದಗೌಸ ಮಾರನಬಸರಿ, ದಸ್ತಗೀರ ಗಡವಾಲೆ, ಇಮಾಮಸಾಬ ದರಗಾದ, ಮಲೀಕ ಎಲಿಗಾರ, ಶಬ್ಬೀರ ಖಾಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net