

ಹುಕ್ಕೇರಿ: ಪ್ರತಿಯೊಬ್ಬ ಮನುಷ್ಯ ಶ್ರದ್ಧೆಯಿಂದ ದೇಶಸೇವೆ ಮಾಡಬೇಕು ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಹುಕ್ಕೇರಿ ತಾಲೂಕಿನ ಅಕ್ಕಿವಾಟ ಗ್ರಾಮದಲ್ಲಿ ಶ್ರೀರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಿಮಿತ್ತ ಗ್ರಾಮದಲ್ಲಿ ಆಯೋಜಿಸಿದ್ದ ಹನುಮಾನ ಮಂದಿರ ಹಾಗೂ ಬಸವೇಶ್ವರ ಮಂದಿರದ ಕಳಸಾರೋಣ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಸಮಾಜ ಸೇವೆಯಲ್ಲಿ ತೊಡಗಿರುವ ಸಂತೋಷ ಬಲೋಬಾಳ, ಬಾಬುರಾವ್ ಹನಿಮನಾಳ, ಮಾರುತಿ ಶೆಟ್ಟೆನ್ನವರ, ಅನಿಲ ನಲವಡೆ, ರಮೇಶ ಕಾಂಬ್ಳೆ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸುಮಂಗಲೆಯರ ಪೂರ್ಣಕುಂಭ, ಆರತಿಮೇಳ, ಕರಡಿಮಜಲು ಬೀದಿಗಳಲ್ಲಿ ಸಂಚರಿಸಿ, ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮುಕ್ತಾಯಗೊಂಡಿತು. ಅಪ್ಪಾಸಾಬ ಶೆಟ್ಟಣ್ಣವರ ನಿರೂಪಿಸಿದರು.