ಪ್ರಾಮಾಣಿಕ ಸೇವೆಯಿಂದ ಚನ್ನಮ್ಮ ಬ್ಯಾಂಕ್ ಪ್ರಸಿದ್ಧಿ

14Manju4
ಬೆಳಗಾವಿ ನಗರದ ಕೆಎಲ್‌ಇ ಸೆಂಟೆನರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸರ್ವಸಾಧಾರಣ ಸಭೆಯನ್ನು ಅಧ್ಯಕ್ಷೆ ಆಶಾ ಪ್ರಭಾಕರ ಕೋರೆ ಉದ್ಘಾಟಿಸಿದರು. ರತ್ನಪ್ರಭಾ ಬೆಲ್ಲದ, ರೂಪಾ ಮುನವಳ್ಳಿ ಇತರರಿದ್ದರು.
Published on

ಬೆಳಗಾವಿ: ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ಬದ್ಧತೆ ಹಾಗೂ ಪ್ರಾಮಾಣಿಕ ಸೇವೆಯಿಂದ ಗ್ರಾಹಕರ ಮನೆಮಾತಾಗಿದೆ. ರಾಜ್ಯದ ಸಹಕಾರಿ ಬ್ಯಾಂಕ್‌ಗಳಲ್ಲಿಯೇ ಉತ್ಕೃಷ್ಟ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷೆ ಆಶಾ ಪ್ರಭಾಕರ ಕೋರೆ ಹೇಳಿದರು.

ನೆಹರೂ ನಗರದ ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಸ್ಮಾರಕ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕಿನ 27ನೇ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ಅಲ್ಪಾವಯಲ್ಲಿ ಸಾವಿರಾರು ಗ್ರಾಹಕರ ಮೆಚ್ಚುಗೆ ಗಳಿಸಿದೆ. ಇಂದಿನ ಕಾಲಮಾನಕ್ಕೆ ತಕ್ಕಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಬ್ಯಾಂಕಿನಿಂದ ಒದಗಿಸಲಾಗುತ್ತಿದೆ. ಪ್ರತಿ ಬ್ಯಾಂಕಿನ ಎಲ್ಲ ಶಾಖೆಗಳು ಪ್ರಗತಿಪಥದಲ್ಲಿ ಮುನ್ನಡೆದಿವೆ ಎಂದರು.

ಬ್ಯಾಂಕಿನಲ್ಲಿ 355.96 ಕೋಟಿ ರೂ. ಠೇವಣಿ ಇದ್ದು, ಹಿಂದಿನ ವರ್ಷಗಳಿಗಿಂತ ಶೇ 8.48 ಪ್ರಗತಿ ಸಾಸಿದೆ. 206.52 ಕೋಟಿ ರೂ.ಸಾಲ ನೀಡಲಾಗಿದೆ. 519.40 ಲಕ್ಷ ರೂ. ಲಾಭ ಗಳಿಸಿದೆ. ಬ್ಯಾಂಕ್ 26 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಪ್ರಯುಕ್ತ ಬ್ಯಾಂಕಿನ ಸದಸ್ಯರಿಗೆ ಶೇ. 15 ಡಿವಿಡೆಂಡ್ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ನಿರ್ದೇಶಕಿ ರೂಪಾ ಮುನವಳ್ಳಿ, ರತ್ನಪ್ರಭಾ ಬೆಲ್ಲದ, ಬ್ಯಾಂಕಿನ ಆಡಳಿತ ಮಂಡಳಿ ಪದಾಕಾರಿಗಳು, ಸದಸ್ಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net