ಪ್ರಾಮಾಣಿಕ ಸೇವೆಯಿಂದ ಪ್ರಗತಿ ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದ ಜೈನ ಸಮುದಾಯದ ಮುಖಂಡ ದಿ. ಡಾ.ನೇಮಣ್ಣ ಬೋಮಾಜ ಸ್ಥಾಪಿಸಿದ ಶ್ರೀ ಶಾಂತಿಸಾಗರ ಕ್ರೆಡಿಟ್ ಸಹಕಾರಿ ಪ್ರಗತಿ ಸಾಧಸಲಿ ಎಂದು ನಾಂದನಿ ಜೈನ ಮಠದ ಜಿನಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು. ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಈಚೆಗೆ ಶ್ರೀ ಶಾಂತಿಸಾಗರ ಕ್ರೆಡಿಟ್ ಸಹಕಾರಿಯ 10ನೇ ಶಾಖೆಗೆ ಪೂಜೆ ಸಲ್ಲಿಸಿ ಮಾತನಾಡಿದರು. ನಿರ್ದೇಶಕ ಡಾ.ಮಹಾದವಲ ಭೋಮಾಜ ಮಾತನಾಡಿ, ಶ್ರೀ ಶಾಂತಿಸಾಗರ ಕ್ರೆಡಿಟ್ ಸಹಕಾರಿ 48 ಕೋಟಿ ರೂ. ಠೇವಣಿ ಸಂಗ್ರಹಿಸಿ, 32 ಕೋಟಿ ರೂ. ಸಾಲ ವಿತರಿಸಿದೆ ಎಂದರು. ಇಂಗಳಿಯ ಜ್ಞಾನದೇವ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಹಂಚಿನಾಳ ಗುರುಯೋಗಾಶ್ರಮ ಮಠದ ಮಹೇಶಾನಂದ ಶ್ರೀಗಳು, ಶಾಸಕ ರಾಜು ಕಾಗೆ ಮತ್ತು ಜೈನ ಅಸೋಸಿಯೇಶನ್ ಉಪಾಧ್ಯಕ್ಷ ಶೀತಲಗೌಡ ಪಾಟೀಲ ಮಾತನಾಡಿದರು. ಗಣ್ಯರನ್ನು ಸನ್ಮಾನಿಸಲಾಯಿತು. ಸಹಕಾರಿ ಅಧ್ಯಕ್ಷ ವಿದ್ಯಾಸಾಗರ ಮಾನಗಾಂವೆ, ಉಪಾಧ್ಯಕ್ಷ ಪುರಂದರ ಕನವಾಡೆ, ಶಾಖೆ ಅಧ್ಯಕ್ಷ ಚಂದ್ರಕಾಂತ ಮಸೋಟಗಿ, ಸದಸ್ಯರಾದ ಮನೋಜ ಮಾಲಗತ್ತಿ, ಬಿಪಿನಚಂದ ಗಣೇಶವಾಡಿ, ಸುರೇಶ ಹೊಸವಾಡೆ, ಆದಿನಾಥ ಪಾಟೀಲ, ಸಾಗರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಅನಂತಕುಮಾರ ಐನಾಪುರೆ, ಶಾಖಾ ವ್ಯವಸ್ಥಾಪಕ ಬಾಹುಬಲಿ ಕಾಮಗೌಡ ಇತರರು ಇದ್ದರು. 2-1 ----------------------

2KAGWAD1
Published on

ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದ ಜೈನ ಸಮುದಾಯದ ಮುಖಂಡ ದಿ. ಡಾ.ನೇಮಣ್ಣ ಬೋಮಾಜ ಸ್ಥಾಪಿಸಿದ ಶ್ರೀ ಶಾಂತಿಸಾಗರ ಕ್ರೆಡಿಟ್ ಸಹಕಾರಿ ಪ್ರಗತಿ ಸಾಧಸಲಿ ಎಂದು ನಾಂದನಿ ಜೈನ ಮಠದ ಜಿನಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು.

ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಈಚೆಗೆ ಶ್ರೀ ಶಾಂತಿಸಾಗರ ಕ್ರೆಡಿಟ್ ಸಹಕಾರಿಯ 10ನೇ ಶಾಖೆಗೆ ಪೂಜೆ ಸಲ್ಲಿಸಿ ಮಾತನಾಡಿದರು.

ನಿರ್ದೇಶಕ ಡಾ.ಮಹಾದವಲ ಭೋಮಾಜ ಮಾತನಾಡಿ, ಶ್ರೀ ಶಾಂತಿಸಾಗರ ಕ್ರೆಡಿಟ್ ಸಹಕಾರಿ 48 ಕೋಟಿ ರೂ. ಠೇವಣಿ ಸಂಗ್ರಹಿಸಿ, 32 ಕೋಟಿ ರೂ. ಸಾಲ ವಿತರಿಸಿದೆ ಎಂದರು.

ಇಂಗಳಿಯ ಜ್ಞಾನದೇವ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಹಂಚಿನಾಳ ಗುರುಯೋಗಾಶ್ರಮ ಮಠದ ಮಹೇಶಾನಂದ ಶ್ರೀಗಳು, ಶಾಸಕ ರಾಜು ಕಾಗೆ ಮತ್ತು ಜೈನ ಅಸೋಸಿಯೇಶನ್ ಉಪಾಧ್ಯಕ್ಷ ಶೀತಲಗೌಡ ಪಾಟೀಲ ಮಾತನಾಡಿದರು.

ಗಣ್ಯರನ್ನು ಸನ್ಮಾನಿಸಲಾಯಿತು. ಸಹಕಾರಿ ಅಧ್ಯಕ್ಷ ವಿದ್ಯಾಸಾಗರ ಮಾನಗಾಂವೆ, ಉಪಾಧ್ಯಕ್ಷ ಪುರಂದರ ಕನವಾಡೆ, ಶಾಖೆ ಅಧ್ಯಕ್ಷ ಚಂದ್ರಕಾಂತ ಮಸೋಟಗಿ, ಸದಸ್ಯರಾದ ಮನೋಜ ಮಾಲಗತ್ತಿ, ಬಿಪಿನಚಂದ ಗಣೇಶವಾಡಿ, ಸುರೇಶ ಹೊಸವಾಡೆ, ಆದಿನಾಥ ಪಾಟೀಲ, ಸಾಗರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಅನಂತಕುಮಾರ ಐನಾಪುರೆ, ಶಾಖಾ ವ್ಯವಸ್ಥಾಪಕ ಬಾಹುಬಲಿ ಕಾಮಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net