ಬಣಜಿಗ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ

banajiga
Published on

ಗಜೇಂದ್ರಗಡ: ಬಣಜಿಗರು ಬಸವಣ್ಣನವರ ಅನುಯಾಯಿಗಳಾಗಿದ್ದು, ಅವರ ಆದರ್ಶಗಳನ್ನು ರೂಢಿಸಿಕೊಂಡು ದೇಶ ಹಾಗೂ ವಿದೇಶದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಮೈಸೂರು ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಜೇಂದ್ರಗಡ-ಉಣಚಗೇರಿ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ 11ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನನ್ನ ರಾಜಕೀಯ ಬದುಕಿನಲ್ಲಿ ಬಣಜಿಗರು ಮುಖ್ಯಪಾತ್ರ ವಹಿಸಿ, ನನಗೆ ಸೇವೆ ಮಾಡಿಕೊಡಲು ಅವಕಾಶ ನೀಡಿದ್ದೀರಿ. ನನ್ನ ಅಧಿಕಾರ ಮಿತಿಯಲ್ಲಿ ಸಮಾಜ ಹಾಗೂ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಮಾಜದ ಗೌರವಾಧ್ಯಾಕ್ಷ ಡಾ.ಬಿ.ವಿ. ಕಂಬಳ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಸ್. ಶೀಲವಂತರ ಮಾತನಾಡಿ, ಸಮಾಜದ ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಇತರ ಕಾರ್ಯಕ್ರಮ ನಡೆಸಲು ಪಟ್ಟಣದಲ್ಲಿ ಜಾಗ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಶಿಕ್ಷಕಿ ಶಿವಗಂಗಾ ರಂಜಣಗಿ ಉಪನ್ಯಾಸ ನೀಡಿದರು. ಕುದರಿಮೋತಿ ಮೈಸೂರು ಸಂಸ್ಥಾನ ಮಠದ ವಿಜಯಮಹಾಂತ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು.

ಸಮಾಜದ ಅಧ್ಯಕ್ಷ ಎಸ್.ಎಸ್. ವಾಲಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಸುವರ್ಣಾ ನಂದಿಹಾಳ, ಅಧ್ಯಕ್ಷೆ ಕೀರ್ತಿ ಕೊಟಗಿ, ಯುವ ಘಟಕದ ಗೌರವಾಧ್ಯಕ್ಷ ಅವಿನಾಶ ಕೊಟಗಿ, ಘಟಕ ಅಧ್ಯಕ್ಷ ಅಂದಪ್ಪ ಸಂಕನೂರ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ನಿವೃತ್ತ ಪ್ರಾಚಾರ್ಯ ಮಹಾರುದ್ರಪ್ಪ ನರಗುಂದ, ಅಪ್ಪು ಮತ್ತಿಕಟ್ಟಿ, ಮಂಜುನಾಥ ಅಂಗಡಿ, ಮುತ್ತಣ್ಣ ಚಟ್ಟೇರ, ಮಹಾಂತೇಶ ಅರಳಿ, ಮಹಾಂತೇಶ ಮಳಗಿ, ಮಹಾಂತೇಶ ಗಂಧದ, ಅನುರಾಗ ಚಿನಿವಾಲರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net