ಸಹಕಾರಿ ಸಂಘದ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ

Sincere effort for the growth of cooperative society
ಚಿಮ್ಮಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಶಂಕರ ಬಟಕುರ್ಕಿ, ವಿರುಪಾಕ್ಷಪ್ಪ ನಾಗಪ್ಪ ಕುದರಿ ಅವರನ್ನು ಸನ್ಮಾನಿಸಲಾಯಿತು. ಪಿಕೆಪಿಎಸ್ ಮಾಜಿ ಅಧ್ಯಕ್ಷ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪ ಪೂಜಾರಿ, ಅಣ್ಣಪ್ಪ ಪಾಟೀಲ, ಗುರಲಿಂಗಪ್ಪ ಪೂಜೇರಿ, ಬಾಳಪ್ಪ ಹಳಿಂಗಳಿ ಇತರರಿದ್ದರು.
Published on

ಚಿಮ್ಮಡ: ರೈತರು, ಸದಸ್ಯರಿಗೆ ಸೂಕ್ತ ನೆರವು, ಸಹಕಾರ ನೀಡುವ ಮೂಲಕ ಸಹಕಾರಿ ಸಂಘದ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಪಿಕೆಪಿಎಸ್ ನೂತನ ಅಧ್ಯಕ್ಷ ಶಂಕರ ಬಟಕುರ್ಕಿ ಹೇಳಿದರು.

ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ಸ್ವಾಗತ ಹಾಗೂ ನೂತನ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ರೈತರ ಜೀವನಾಡಿಯಾಗಿರುವ ಈ ಸಂಘವನ್ನು ರೈತ, ನೇಕಾರ, ಕೂಲಿ ಕಾರ್ಮಿಕರ ಹಾಗೂ ವ್ಯಾಪಾರಸ್ಥರ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ಆಡಳಿತ ಮಂಡಳಿ ನಿರ್ದೇಶಕರಾಗಿ ಆಯ್ಕೆಗೊಂಡ ಹಣಮಂತ ನೇಸೂರ, ರಾಮಪ್ಪ ಜಗದಾಳ, ಚನ್ನಪ್ಪ ಬಿಳ್ಳೂರ, ಸಿದ್ರಾಮಪ್ಪ ಮುನ್ನೋಳಿ, ಮಲ್ಲಪ್ಪ ಜಾಂಗನೂರ, ನಿಂಗಪ್ಪ ಪೂಜಾರಿ, ಹಣಮಂತ ಕೋಳಿ, ಪರಪ್ಪ ಗೋವಿಂದಗೋಳ, ಅನ್ನಪೂರ್ಣ ಮುಗಳಖೋಡ, ಯಮನವ್ವ ನಾವಿ ಮತ್ತಿತರರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಅಧ್ಯಕ್ಷ ಸ್ಥಾನಕ್ಕೆ ಶಂಕರ ಗಂಗಪ್ಪ ಬಟಕುರ್ಕಿ, ಉಪಾಧ್ಯಕ್ಷ ಸ್ಥಾನಕ್ಕೆ ವಿರುಪಾಕ್ಷಪ್ಪ ನಾಗಪ್ಪ ಕುದರಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನೇ ಅವಿರೋಧವಾಗಿ ಆಯ್ಕೆಗೊಳಿಸಿ ಚುನಾವಣಾಧಿಕಾರಿ ಜಮಾದರ ಘೋಷಿಸಿದರು.

ಪಿಕೆಪಿಎಸ್ ಮಾಜಿ ಅಧ್ಯಕ್ಷ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪ ಪೂಜಾರಿ, ಅಣ್ಣಪ್ಪ ಪಾಟೀಲ, ಗುರಲಿಂಗಪ್ಪ ಪೂಜೇರಿ, ಬಾಳಪ್ಪ ಹಳಿಂಗಳಿ, ಗ್ರಾಪಂ ಅಧ್ಯಕ್ಷ ಆನಂದ ಕವಟಿ, ಪರಪ್ಪ ಪಾಲಬಾಂವಿ, ಬೀರಪ್ಪ ಹಳೆಮನಿ, ಬಸವರಾಜ ಕುಂಚನೂರ, ಪ್ರಭು ಮುಧೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net