ಸರಳವಾಗಿ ಮಹಾವೀರ ಜಯಂತಿ ಆಚರಣೆ

6manju3-Web
ಬೆಳಗಾವಿ ನಗರದ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಭಗವಾನ ಮಹಾವೀರ ಜಯಂತಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಇತರರು ಇದ್ದರು.
Published on

ಬೆಳಗಾವಿ: ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಸೋಮವಾರ ಭಗವಾನ ಮಹಾವೀರ ಜನ್ಮ ಕಲ್ಯಾಣಕ್ ಮಹಾಮಹೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ನಗರದ ಬಸವರಾಜ ಕಟ್ಟಿಮನಿ ಸಭಾಗೃಹದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ , ಜೈನ ಸಮುದಾಯದ ಮುಖಂಡರಾದ ರಾಜೇಂದ್ರ ಜೈನ, ವಿನೋದ ದೊಡ್ಡಣ್ಣವರ ಭಗವಾನ ಮಹಾವೀರ ಪ್ರತಿಮೆಗೆ ಮಾಲಾರ್ಪಣೆ ಮಾಡಿಪೂಜೆ ಸಲ್ಲಿಸಿದರು.
ರಾಜು ಖೋಡಾ, ಕುಂತಿನಾಥ ಕಲಮನಿ, ಸನ್ಮತಿ ಕಸ್ತೂರಿ, ಹೀರಾಚಂದ ಕಲಮನಿ, ಅಭಯ ಅವಲಕ್ಕಿ, ರಾಜು ಜಕ್ಕಣ್ಣವರ, ಸನತಕುಮಾರ ವಿ.ವಿ., ವರ್ಧಮಾನ ಮಾರಗನಕೊಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net