ಮಂಡಳಿ ಷರತ್ತುಗಳನ್ನು ಸರಳೀಕರಣಗೊಳಿಸಿ

01-01-Shiva-2
ಕಟ್ಟಡ ಕಾರ್ಮಿಕರ ನೋಂದಣಿಗೆ ವಿಸಿರುವ ಷರತ್ತುಗಳನ್ನು ಸರಳೀಕರಣಗೊಳಿಸುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು. ಸಮಿತಿ ಜಿಲ್ಲಾಧ್ಯಕ್ಷ ತಿಮ್ಮಪ್ಪ ಸ್ವಾಮಿ, ಪದಾಕಾರಿಗಳಾದ ವೀರಣ್ಣ, ರಂಗಪ್ಪ ಅಸ್ಕಿಹಾಳ, ವೀರನಗೌಡ, ನಾಗರಾಜ, ಭೀಮಣ್ಣ, ಸದಾನಂದ ಸ್ವಾಮಿ, ರಮೇಶ, ವೆಂಕಟೇಶ ಬಳಿಗೇರ ಇದ್ದರು.
Published on

ರಾಯಚೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಮತ್ತು ನವೀಕರಣ ಕಲ್ಯಾಣ ಮಂಡಳಿ ವಿಸಿರುವ ಷರತ್ತುಗಳನ್ನು ಸರಳೀಕರಣಗೊಳಿಸಬೇಕು ಂದು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಒತ್ತಾಯಿಸಿದೆ.
ಸಂಘದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಸೋಮವಾರ ಮನವಿ ಸಲ್ಲಿಸಿ, ಕಾರ್ಮಿಕರ ನೋಂದಣಿಗೆ ಕಟ್ಟಡ ಪರವಾನಗಿ ಪತ್ರ, ನಕ್ಷೆ ಅನುಮೋದನೆ ಪತ್ರ ನೀಡುವುದನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ವೇತನ ಚೀಟಿ ಹಾಗೂ ಹಾಜರಾತಿ ನಿಯಮಗಳನ್ನು ರದ್ದುಗೊಳಿಸಬೇಕು. ಕಟ್ಟಡ ಕಾರ್ಮಿಕರಿಗೆ ಇಎಸ್‌ಐ ಆಸ್ಪತ್ರೆ ಮಂಜೂರು ಮಾಡಬೇಕು. ಶೈಕ್ಷಣಿಕ ಧನ ಸಹಾಯವನ್ನು ಹಿಂದಿನಂತೆ ಮುಂದುವರಿಸಬೇಕು. ಸೆಸ್ ಹಣ ಸಂಗ್ರಹಣೆಗೆ ವಿಶೇಷ ತಂಡ ನೇಮಕ ಮಾಡಬೇಕು.
ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಲು ಮಂಡಳಿಯಿಂದ 5 ಲಕ್ಷ ರೂ.ಗಳನ್ನು ಮಂಜೂರು ಮಾಡಬೇಕು. ಬೋಗಸ್ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕಾಗಿ ಸ್ಲಂ ಬೋರ್ಡ್‌ನಿಂದ ನೀಡಿದ ಸಹಾಯಧನವನ್ನು ಹಿಂಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ತಿಮ್ಮಪ್ಪ ಸ್ವಾಮಿ, ಪದಾಕಾರಿಗಳಾದ ವೀರಣ್ಣ, ರಂಗಪ್ಪ ಅಸ್ಕಿಹಾಳ, ವೀರನಗೌಡ, ನಾಗರಾಜ, ಭೀಮಣ್ಣ, ಸದಾನಂದ ಸ್ವಾಮಿ, ರಮೇಶ, ವೆಂಕಟೇಶ ಬಳಿಗೇರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net