ಸಿಂಹಾರೂಢ ಚಂದ್ರಘಂಟಾ ಅಲಂಕಾರ

ಶ್ರೀಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಿಗೆ ಸಿಂಹಾರೂಢ ಚಂದ್ರಘಂಟಾ ಅಲಂಕಾರ.
Published on

ಳಸ: ನವರಾತ್ರಿಯ ಮೂರನೇ ದಿನ ಶನಿವಾರ ಶ್ರೀ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿಯು ಸಿಂಹಾರೂಢ ಚಂದ್ರಘಂಟಾ ಅಲಂಕಾರದಿಂದ ಕಂಗೊಳಿಸಿ ಭಕ್ತರಿಗೆ ಆಶೀರ್ವದಿಸಿದಳು.

ಬೆಳಗ್ಗೆ ಸಪ್ತಶತೀ ಪಾರಾಯಣ, ವೇದ ಪಾರಾಯಣ, ಸುಂದರ ಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು ಪುರುಷ ಸೂಕ್ತ ಹೋಮ ನಡೆಯಿತು. ಸಿಂಹಾರೂಢ ಚಂದ್ರಘಂಟಾ ಸ್ವರೂಪವೂ ಪರಮ ಶಾಂತಿದಾಯಕ ಮತ್ತು ಶ್ರೇಯಸ್ಕರವಾಗಿದೆ. ಇವಳ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧ ಚಂದ್ರನಿದ್ದಾನೆ. ಇವಳ ವಾಹನ ಸಿಂಹವಾಗಿದೆ. ಇದರಿಂದಲೇ ಇವಳನ್ನು ಸಿಂಹಾರೂಢ ಚಂದ್ರಘಂಟಾ ಎಂದು ಹೇಳಲಾಗುತ್ತದೆ. ಇವಳ ಶರೀರದ ಬಣ್ಣ ಚಿನ್ನದಂತೆ ಹೊಳೆಯುತ್ತದೆ. ಹತ್ತು ಕೈಗಳಿದ್ದು, ಎಲ್ಲ ಕೈಗಳಲ್ಲಿ ಖಡ್ಗ, ಬಾಣ ಇತ್ಯಾದಿ ಅಸಗಳು ವಿಭೂಷಿತವಾಗಿದ್ದಾಳೆ. ಇವಳ ಮುದ್ರೆಯು ಯುದ್ಧಕ್ಕಾಗಿ ಹೊರಟಂತಿದೆ. ಘಂಟೆಯಂತೆ ಭಯಾನಕ ಚಂಡಧ್ವನಿಯಿಂದ ದಾನವರು ಯಾವಾಗಲೂ ನಡುಗುತ್ತಿರುತ್ತಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಶ್ರೀ ನಿಧಿ ಸುಗಮ ಸಂಗೀತ ವೃಂದದಿಂದ ಸುಗಮ ಸಂಗೀತ, ಸಂಜೆ ವಿದುಷಿ ರೂಪಶ್ರೀ ಮಧುಸೂದನ್ ನತ್ಯ ಗಂಗಾ ಪ್ರದರ್ಶಕ ಕಲಾಕೇಂದ್ರದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಅ.6ರಂದು ಅನ್ನಪೂರ್ಣೇಶ್ವರಿಯು ಮೃಗಾರೂಢ ಕೂಷ್ಮಾಂಡ ಅಲಂಕಾರಗೊಳ್ಳಲಿದ್ದು, ಶ್ರೀಸೂಕ್ತ ಹೋಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಕರ್ನಾಟಕ ಶಾಸೀಯ ಸಂಗೀತ, ಸಂಜೆ ಭರತನಾಟ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net