ಬೆಳ್ಳಿ ಕವಚಧಾರಣ ಸಮಾರಂಭ

GANESH
Published on

ಹುಬ್ಬಳ್ಳಿ: ನಗರದ ಘಂಟಿಕೇರಿ ಓಣಿಯ ಬಸವೇಶ್ವರ ದೇವಸ್ಥಾನದ ಶ್ರೀ ಬಸವಣ್ಣ, ಶ್ರೀ ಗಣಪತಿ ಹಾಗೂ ಶ್ರೀ ಪಾರ್ವತಿ ದೇವರ ಮೂರ್ತಿ ಬೆಳ್ಳಿ ಕವಚಧಾರಣ ಸಮಾರಂಭ ಆ. 28ರಂದು ಆಯೋಜಿಸಲಾಗಿದೆ.

ಬೆಳಗ್ಗೆ 7ಗಂಟೆಗೆ ದೇವರ ಮೂರ್ತಿಗಳ ಬೆಳ್ಳಿ ಕವಚಗಳ ಮೆರವಣಿಗೆಯು ಪೂರ್ಣ ಕುಂಭ ಹಾಗೂ ಸಕಲ ವಾದ್ಯ ವೈಭವದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಆಗಮಿಸಲಿದೆ. 11.30ಕ್ಕೆ ಬೆಳ್ಳಿ ಕವಚ ಧಾರಣ ಮಾಡಲಾಗುವುದು. ಶಿರಹಟ್ಟಿ ಫಕ್ಕಿರೇಶ್ವರ ಸಂಸ್ಥಾನ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಹುಬ್ಬಳ್ಳಿ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ವಿಧಾನ ಪರಿಷತ್ ಸದಸ್ಯಜಗದೀಶ ಶೆಟ್ಟರ್, ಶಾಸಕ ಪ್ರಸಾದ ಅಬ್ಬಯ್ಯ, ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ತಹಸೀಲ್ದಾರ್ ಕಲಗೌಡ ಪಾಟೀಲ ಪಾಲ್ಗೊಳ್ಳುವರು. ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಶೇಖಣ್ಣ ಬೆಂಡಿಗೇರಿ ಅಧ್ಯಕ್ಷತೆ ವಹಿಸವರು.

ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ ಆನಂದ ಕಮತಗಿ, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಬಾಣದ, ಬೆಳ್ಳಿ ಕವಚ ತಯಾರಕ ನವೀನ ಕಡ್ಲಾಸ್ಕರ, ದಾನಿಗಳಾದ ಗುರುಸಿದ್ದಪ್ಪ ಇಂಗಳಗಿ, ನಿಂಗಪ್ಪ ಪುಟ್ಟಪ್ಪನವರ ಹಾಗೂ ಪ್ರಕಾಶ ಅಬ್ಬಿಗೇರಿ ಅವರನ್ನು ಸನ್ಮಾನಿಸಲಾಗುವುದು ಎಂದು ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net