ರಾಘವೇಂದ್ರ ನಾಯಕ್‌ಗೆ ಬೆಳ್ಳಿ ಪದಕ

raghavendra nayak
ರಾಘವೇಂದ್ರ ನಾಯಕ್.
Published on

ಕಾರ್ಕಳ: ತುಮಕೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಪದವಿ ಪೂರ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ. ಪಪೂ ಕಾಲೇಜಿನ ದ್ವಿತೀಯ ಪಿಯು ವಾಣಿಜ್ಯ ವಿದ್ಯಾರ್ಥಿ ರಾಘವೇಂದ್ರ ನಾಯಕ್ 19 ವರ್ಷದೊಳಗಿನವರ ಜಾವೆಲಿನ್ ಥ್ರೋನಲ್ಲಿ 55.94 ಮೀ. ದೂರಕ್ಕೆ ಎಸೆದು ಬೆಳ್ಳಿ ಪದಕ ಗೆದ್ದಿದ್ದಾರೆ. ನ.26ರಿಂದ 28ರವರೆಗೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಪಪೂ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net