ರಾಷ್ಟ್ರೀಯ ಬಾಕ್ಸಿಂಗ್‌ನಲ್ಲಿ ಪ್ರಜ್ವಲಾಗೆ ಬೆಳ್ಳಿ ಪದಕ

Published on

ಗೋಣಿಕೊಪ್ಪ: ಖೇಲೊ ಇಂಡಿಯಾ ದಕ್ಷಿಣ ವಲಯ ಟ್ಯಾಲೆಂಟ್ ಹಂಟ್ ಮುಕ್ತ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಗೋಣಿಕೊಪ್ಪ ಲಯನ್ಸ್ ಪದವಿ ಪೂರ್ವ ಕಾಲೇಜಿನ ಮನ್ನಕ್ಕಮನೆ ಬಿ.ಪ್ರಜ್ವಲಾ ಬೆಳ್ಳಿ ಪದಕ ಪಡೆದಿದ್ದಾರೆ.


ಇತ್ತೀಚೆಗೆ ಬೆಂಗಳೂರಿನ ಜಯಪ್ರಕಾಶ್ ನಾರಾಯಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯಿಂದ ಗೋಣಿಕೊಪ್ಪ ಕಾವೇರಿ ಕಾಲೇಜಿನ ಯು.ಎನ್.ಮೋನಿಕಾ, ಯು.ಆರ್.ಮಂದಣ್ಣ, ಪೊನ್ನಂಪೇಟೆ ಸಂತ ಅಂತೋಣಿ ಅನ್ನಮ್ಮ ಶಾಲೆಯ ಎಂ.ಎಸ್.ಪ್ರಜ್ವಲ್ ಹಾಗೂ ಪೊನ್ನಂಪೇಟೆ ಪದವಿ ಪೂರ್ವ ಕಾಲೇಜಿನ ಪಿ.ಎಸ್.ಕಾರ್ತಿಕ್ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು.
ಬೆಳ್ಳಿ ಪದಕಕ್ಕೆ ಭಾಜನರಾಗಿರುವ ಮನ್ನಕ್ಕಮನೆ ಎಂ.ಬಿ.ಪ್ರಜ್ವಲಾ 5 ಬಾರಿ ರಾಷ್ಟ್ರೀಯ ಬಾಕ್ಸಿಂಗ್‌ನಲ್ಲಿ ಭಾಗವಹಿಸಿದ್ದರು. ಇವರು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯಾಬಾಲು ಹಾಗೂ ಬಾಲಕೃಷ್ಣ ದಂಪತಿ ಪುತ್ರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net