ಬೆಳ್ಳಿಯ ಬದುಕು ರೈತರ ಬದುಕು ಅಭಿನಂದನೆ ಸಮಾರಂಭ

mm 30-5
Published on

ವಿಜಯಪುರ:ಸರ್ಕಾರಿ ಸಿಬ್ಬಂದಿ ತಮ್ಮ ಸೇವಾ ಅವಧಿಯಲ್ಲಿ ಮಾಡಿದ ಕಾರ್ಯಗಳು ಅವರ ನಿವೃತ್ತಿ ನಂತರವೂ ಜನ ಸ್ಮರಿಸುವಂತೆ ಇರಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದ ಸಹಾಯಕ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಅವರ ಸೇವಾ ನಿವೃತ್ತಿ ಆಗುತ್ತಿರುವ ಹಿನ್ನೆಲೆ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ "ಬೆಳ್ಳಿಯ ಬದುಕು&ರೈತರ ಬೆಳಕು' ಕೃತಜ್ಞತಾ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೆಳ್ಳಿ ಅವರು ರೈತರ ಕಾಳಜಿ ಜತೆಗೆ ಒಂದೇ ಸ್ಥಳದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಅವರ ರೈತ ಬಳಗವು ಸ್ವಂತ ಖರ್ಚಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾನೀಯ. ಇಲ್ಲಿ ಸೇರಿದ ರೈತ ಬಂಧುಗಳನ್ನು ನೋಡಿದರೆ ಅವರ ಸೇವಾ ಬದ್ಧತೆ, ಕಾರ್ಯತತ್ಪರತೆ ತೋರಿಸುತ್ತದೆ ಎಂದ ಅವರು, ಸಿದ್ಧೇಶ್ವರ ಸಂಸ್ಥೆಯ ಕಗ್ಗೋಡದ ಗೋಶಾಲೆಯಲ್ಲಿ ರೈತರಿಗಾಗಿ ತರಬೇತಿ, ವಸತಿ ವ್ಯವಸ್ಥೆ ಮಾಡಲು ಯೋಚಿಸಿದ್ದು, ಬೆಳ್ಳಿಯವರು ತಮ್ಮ ನಿವೃತ್ತಿಯ ಬದುಕನ್ನು ಗೋಶಾಲೆಯಲ್ಲಿ ರೈತರಿಗೆ ಸಾವಯವ, ನೈಸರ್ಗಿಕ ಕೃಷಿ ತರಬೇತಿ ನೀಡಬೇಕು ಎಂದು ವಿನಂತಿಸಿದರು.

ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿ ಡಾ. ವಿಷ್ಣುವರ್ಧನ್​ ಮಾತನಾಡಿ, ಡಾ. ಬೆಳ್ಳಿ ಅವರು "ರೈತ ಸೇವೆಯೇ ಜನಾರ್ಧನ ಸೇವೆ' ಎಂದು ನಂಬಿ ಬದುಕಿದವರು. ಅವರ ಅವಧಿಯಲ್ಲಿ ರೈತರಿಗಾಗಿ ಹಲವು ಲೇಖನಗಳನ್ನು ಬರೆಯುವ ಜತೆಗೆ ಅನೇಕರಿಗೆ ತರಬೇತಿ ಆಯೋಜಿಸಿದ್ದಾರೆ. ಅವರದು ಸಾರ್ಥಕ ಬದುಕು ಎಂದು ತಿಳಿಸಿದರು.

ಧಾರವಾಡ ಕೃಷಿ ವಿವಿ ವಿಶ್ರಾಂತಿ ಕುಲಪತಿ ಡಾ. ವಿ.ಐ. ಬಣಗಿ ಮಾತನಾಡಿ, ಬೆಳ್ಳಿಯವರು ತಾಂತ್ರಿಕತೆಗಳನ್ನು ವಿವಿಧ ಮಾಧ್ಯಮಗಳ ಪ್ರಾತ್ಯಕ್ಷಕ್ಕೆ ೇತ್ರೋತ್ಸವ ಮೂಲಕ ಪರಿಣಾಮಕಾರಿ ಅನುಷ್ಠಾನಗೊಳಿಸಿ ರೈತರ ಆರ್ಥಿಕಾಭಿವೃದ್ಧಿಗೆ ಶ್ರಮಿಸಿದರು ಎಂದರು.

ಅಧ್ಯಕ್ಷತೆ ವಹಿಸಿದ ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಎ.ಬಿ. ಪಾಟೀಲ ಮಾತನಾಡಿ, ಡಾ. ಬೆಳ್ಳಿಯವರು ಸದಾ ಕ್ರಿಯಾಶೀಲರು. ನಿವೃತ್ತಿ ನಂತರವು ಜಿಲ್ಲೆಯಲ್ಲಿರುವ ರೈತ ಉತ್ಪಾದಕ ಸಂಸ್ಥೆಗಳನ್ನು ಒಟ್ಟುಗೂಡಿಸಿ ರೈತ ಉತ್ಪಾದಕರ ಒಕ್ಕೂಟ ಸ್ಥಾಪಿಸಿ ರೈತರಿಗೆ ನ್ಯಾಯ ಒದಗಿಸಲಿ.

ರೈತರು ಬೆಳೆಗಳಿಗೆ ಯೋಗ್ಯ ಬೆಲೆ ಬರುವಂತೆ ಉಪ ಉತ್ಪನ್ನ ತಯಾರಿಸುವ ಮೂಲಕ ಮಾರುಕಟ್ಟೆ ಕಲ್ಪಿಸಿ ರೈತರ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮ ವಹಿಸಲಿ ಎಂದು ಸಲಹೆ ನೀಡಿದರು.

ಬೆಳಗಾವಿಯ ಅಮ್ಮ ಪ್ರತಿಷ್ಠಾನದ ಅಧ್ಯಕ್ಷ ಬಾಳಾಸಾಹೇಬ ಊದಗಟ್ಟಿ ಅವರು ಡಾ. ರವೀಂದ್ರ ಬೆಳ್ಳಿಯವರ ಜೀವಮಾನ ಸಾಧನೆಗಾಗಿ ರೈತ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.

ಆರ್ಟ್​ ಆಫ್​ ಲಿವಿಂಗ್​ನ ಡಾ. ಬಿ.ಎಂ. ಪಾಟೀಲ ಗುರೂಜಿ, ಜಂಟಿ ಕೃಷಿ ನಿರ್ದೇಶಕರಾದ ಡಾ. ಬಿ. ಮಂಜುನಾಥ, ಶಿವನಗೌಡ ಪಾಟೀಲ, ವ್ಯವಸ್ಥಾಪನಾ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ, ಡೀನ್​ ಡಾ. ಅಶೋಕ ಸಜ್ಜನ, ಪ್ರದಿಪ ದೊಡ್ಡವಾಡ, ಮಂಜುಳಾ ಯಡೂರ, ಶಿವಪ್ರಕಾಶ ಬಿರಾದಾರ, ಗಿರೀಶ ಕುಲಕರ್ಣಿ, ರೈತ ಸಂದ ಅಧ್ಯಕ್ಷ ಸಂಗಮೇಶ ಸಗರ, ಬಸವರಾಜ ತಮದಡ್ಡಿ, ಡಾ. ಎಸ್​.ಎಂ. ವಸದ, ಡಾ. ಶಿವಶಂಕರ ಮೂರ್ತಿ, ಡಾ. ಆರ್​.ಕೆ. ರಾಮಚಂದ್ರ, ಪ್ರಗತಿಪರ ರೈತರಾದ ಎಸ್​.ಟಿ. ಪಾಟೀಲ, ಸಿದ್ದು ಬಾಲಗೊಂಡ, ಸಿದ್ದಪ್ಪ ಬೂಸಗೊಂಡ, ಕಲ್ಮೇಶ ತೋಟದ, ಪರಮೇಶ್ವರ ಬೋಸಗಿ, ಶಿವು ಕುಂಬಾರ, ಬಸಿರಹಮ್ಮದ್​ ಬಳಗಾರ, ಕಲ್ಲು ಸೊನ್ನದ, ಕೃಷಿ ಸಖಿಯರಾದ ತ್ರೀವೇಣಿ ಉದ್ದಂಡ, ಚಾಂದಬಿ ಆಲಮೇಲ ಮತ್ತಿತರರಿದ್ದರು.

ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರು, ಅಭಿಮಾನಿಗಳು ಡಾ. ರವೀಂದ್ರ ಬೆಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಬಸನಗೌಡ ಪಾಟೀಲ ಯತ್ನಾಳ, ಬಿ.ಎಂ. ಪಾಟೀಲ ಗುರೂಜಿ, ಶಿವನಗೌಡ ಪಾಟೀಲ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net