ಶ್ರೀ ಸನ್ನಿಧಿ ಆಶ್ರಮದ ಬೆಳ್ಳಿ ಮಹೋತ್ಸವ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶ್ರೀ ವಿದ್ಯಾಧರತೀರ್ಥ ಗುರೂಜಿ ಸ್ಥಾಪಿತ, ಇಲ್ಲಿನ ಕ್ಯಾರಕೊಪ್ಪ ಗ್ರಾಮದ ಶ್ರೀ ಸನ್ನಿಧಿ ಆಶ್ರಮದ ಬೆಳ್ಳಿ ಮಹೋತ್ಸವ ಸಮಾರಂಭವನ್ನು ನ. 21ರಂದು ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ ಅಭಿಷೇಕ, ಸತ್ಯನಾರಾಯಣ ಪೂಜೆ ನೆರವೇರಲಿದೆ. ಬೆಳಗ್ಗೆ 8 ಗಂಟೆಗೆ ಶ್ರೀ ಗುರುದೇವ ದತ್ತ ಹಾಗೂ ಶ್ರೀ ಗುರು ದತ್ತ ಸ್ವರೂಪಿ ಪದ್ಮಾತಾಯಿ ಹೋಮ, ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ, ಮಧುಕರಿ ಪ್ರಸಾದ ನೆರವೇರಲಿದೆ.

ಬೆಳಗ್ಗೆ 10 ಗಂಟೆಯಿಂದ ಶ್ರೀ ಗುರು ದತ್ತ ಸ್ವರೂಪಿ ಪದ್ಮಾತಾಯಿ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಅತಿಥಿಯಾಗಿ ಡಾ. ಶಿವಲೀಲಾ ಕಂಬಿ ಆಗಮಿಸಲಿದ್ದಾರೆ. ಡಾ. ರವಿಶಂಕರ ಕನಮಡಿ (ಶ್ರೀ ವಿದ್ಯಾಧರತೀರ್ಥ ಗುರೂಜಿ), ಗಂಗೂತಾಯಿ ರವಿಶಂಕರ ಕನಮಡಿ (ಗುರುಮಾತೆ) ಸಾನ್ನಿಧ್ಯ ವಹಿಸುವರು. ಡಾ. ಸುಧಾ ನಾಗರಕಟ್ಟಿ, ಡಾ. ಸಿ.ಆರ್​. ಹಿರೇಮಠ, ಡಾ. ಅಶೋಕ ಕಿತ್ತೂರ, ಡಾ. ಎಸ್​. ಮಲ್ಲಿಕಾರ್ಜುನಪ್ಪ ಉಪಸ್ಥಿತರಿರುವರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net