ಶ್ರೀ ಮಹಾಬಲೇಶ್ವರನಿಗೆ ಬೆಳ್ಳಿ ರಥ ಅರ್ಪಣೆ

9-gkn- belli
Published on

ಗೋಕರ್ಣ: ಇಲ್ಲಿನ ಉಪಾಧಿವಂತ ಮಂಡಳ ನೇತೃತ್ವದಲ್ಲಿ ದಾನಿಗಳ ಸಹಾಯದಿಂದ ನೂತನವಾಗಿ ಸಿದ್ಧಪಡಿಸಿದ ಬೆಳ್ಳಿ ರಥವನ್ನು ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ 32ನೇ ಸ್ವಭಾಷಾ ಚಾತುರ್ವಸ್ಯ ನಿಮಿತ್ತ ಇತ್ತೀಚೆಗೆ ಶ್ರೀದೇವರಿಗೆ ಸಮರ್ಪಿಸಲಾಯಿತು. ಶ್ರೀದೇವರ ವಿವಿಧ ಉತ್ಸವ ನಿಮಿತ್ತ ನಿರ್ವಿುಸಲಾದ ರಥಕ್ಕೆ ಅಗತ್ಯವಿರುವ ಬೆಳ್ಳಿಯನ್ನು ಕೊಡುಗೆ ನೀಡಿದ ಉದ್ಯಮಿ ಎಂ. ಶಿವರಾಮ, ಮಂಡಳದ ಅಧ್ಯಕ್ಷ ರಮೇಶ ಪ್ರಸಾದ, ಪದಾಧಿಕಾರಿಗಳಾದ ವೇ. ಪರಮೇಶ್ವರ ಮಾರ್ಕಾಂಡೆ, ವೇ.ಪ್ರಶಾಂತ ಹಿರೇಗಂಗೆ, ವೇ. ಮಹಾಬಲೇಶ್ವರ ಭಡ್ತಿ, ವೇ. ರಾಮಚಂದ್ರ ಮಾಸ್ಕೇರಿ, ಮಂದಿರ ಸಮಿತಿಯ ವೇ. ಪರಮೇಶ್ವರ ಪ್ರಸಾದ, ಮಹೇಶ ಹಿರೇಗಂಗೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net