ದುರ್ಗಾದೇವಿ ದೇವಸ್ಥಾನಕ್ಕೆ ಬೆಳ್ಳಿ ದೇಣಿಗೆ

IMG_20250604_182128_662.jpg
Published on

ಹುಬ್ಬಳ್ಳಿ: ನಗರದ ದಾಜಿಬಾನ ಪೇಟೆ ಎಸ್ ಎಸ್ ಕೆ ಪಂಚ ಟ್ರಸ್ಟ್ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀದೇವಿಯರಿಗೆ ನೂತನವಾಗಿ ನಿರ್ಮಾಣಗೊಳ್ಳಲಿರುವ ಪ್ರಭಾವಳಿಗಾಗಿ ಒಂದು ಕೆಜಿ ಚೊಕ್ಕ ಬೆಳ್ಳಿಯನ್ನು ದೇಣಿಗೆ ನೀಡಲಾಯಿತು.

ದಾಜಿಬಾನಪೇಟ ನಿವಾಸಿ ಮಹದೇವಸಾ ವಿಷ್ಣುಸಾ ಪೂಜಾರಿ ಇವರು ಮಂಗಳವಾರ ಒಂದು ಕೆಜಿ ಚೊಕ್ಕ ಬೆಳ್ಳಿಯನ್ನು ದೇಣಿಗೆ ನೀಡಿ ನಂತರ ದೇವಿಗೆ ಪೂಜೆ ಸಲ್ಲಿಸಿದರು. ಪಂಚ ಟ್ರಸ್ಟ್ ಪರವಾಗಿ ಮಹದೇವಸಾ ಪೂಜಾರಿ ಇವರನ್ನು ಸತ್ಕರಿಸಲಾಯಿತು.

ಕಮಿಟಿಯ ಚೀಫ್ ಟ್ರಸ್ಟಿ ತಾರಾಸಾ ಧೋಂಗಡಿ, ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ, ಜಾಯಿಂಟ್ ಚೀಫ್ ಟ್ರಸ್ಟಿ ನೀಲಕಂಠ ಜಡಿ, ಕೋಶಾಧಿಕಾರಿ ಅಶೋಕ ಕಲಬುರಗಿ, ಟ್ರಸ್ಟಿಗಳಾದ ಎನ್.ಆರ್. ಹಬೀಬ, ಎ.ಪಿ. ಪವಾರ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net