ಮಂದಾರ್ತಿ ಮೇಳಕ್ಕೆ ಬೆಳ್ಳಿಯ ಕಿರೀಟ ಅರ್ಪಣೆ

Mandarthi
Published on

ಮಂದಾರ್ತಿ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನದ ಮೇಳಗಳ ಪ್ರಥಮ ದೇವರ ಸೇವೆಯ ದಿನ ಶುಕ್ರವಾರ ಯಕ್ಷಗಾನದ ಮೇಳಕ್ಕೆ ದಾನಿ ಬೆಂಗಳೂರು ಉದ್ಯಮಿ, ಕೊಕ್ಕರ್ಣೆ ಸಮೀಪದ ಚೆಗ್ರಿಬೆಟ್ಟು ಮೂಲದ ಸಂಜೀವ ಪೂಜಾರಿ ಬೆಳ್ಳಿಯ ಕಿರೀಟವನ್ನು ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎಚ್.ಧನಂಜಯ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.ದೇವಸ್ಥಾನದ ವತಿಯಿಂದ ದಾನಿಯನ್ನು ಗೌರವಿಸಲಾಯಿತು. ದೇವಳದ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ, ಆನುವಂಶಿಕ ಮೊಕ್ತೇಸರರಾದ ಸುರೇಂದ್ರ ಶೆಟ್ಟಿ, ಎಚ್.ಪ್ರಭಾಕರ ಶೆಟ್ಟಿ, ಎಚ್.ಶಂಭು ಶೆಟ್ಟಿ, ಆರ್.ಶ್ರೀನಿವಾಸ ಶೆಟ್ಟಿ, ಹೆಗ್ಗುಂಜೆ ನಾಲ್ಕು ಮನೆಯವರು, ದೇವಳದ ಅರ್ಚಕ ವೃಂದ, ಸಿಬ್ಬಂದಿ ವರ್ಗ, ದಾನಿ ಕುಟುಂಬಸ್ಥರು ಮತ್ತು ಐದು ಮೇಳಗಳ ಕಲಾವಿದರು, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net