

ಹುಬ್ಬಳ್ಳಿ: ಧಾರವಾಡ ಜಿಲ್ಲಾ ರೇಷ್ಮೆ ಇಲಾಖೆ ನಿವೃತ್ತ ನೌಕರರ ಸಂಘದ ವಾರ್ಷಿಕ ಸಭೆ ಇತ್ತೀಚೆಗೆ ರಾಯಾಪುರ ಬಳಿಯ ರೇಷ್ಮೆ ತರಬೇತಿ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಹಾವೇರಿ, ಗದಗ ಜಿಲ್ಲಾ ಸಂಘಗಳನ್ನು ಧಾರವಾಡ ಸಂಘದೊಂದಿಗೆ ವಿಲೀನಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಹಾವೇರಿ ನಿವೃತ್ತ ನೌಕರರು ಧಾರವಾಡ ಜಿಲ್ಲಾ ಸಂಘದ ಸದಸ್ಯರಾಗಲು ಒಪ್ಪಿಗೆ ಸೂಚಿಸಿದರು.
2024-25ನೇ ಸಾಲಿಗಾಗಿ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಬಿ.ಎ. ಗಾಣಿಗೇರ ಅಧ್ಯಕ್ಷ, ಎಂ.ಎಸ್. ಸವಣೂರ ಉಪಾಧ್ಯಕ್ಷ, ಬಿ.ಡಿ. ಕುಂದರಗಿ ಕಾರ್ಯದರ್ಶಿ, ಎಸ್.ಬಿ. ತಮದಂಡಿ ಸಹಕಾರ್ಯದರ್ಶಿ, ಎಂ.ಐ. ಮಠ ಖಜಾಂಚಿಯಾಗಿ ಆಯ್ಕೆಯಾದರು. ತಾರಾ ಪಾಟೀಲ, ಎಸ್.ಬಿ. ಮೋಟಳ್ಳಿ, ಎಸ್.ಸಿ. ಜಾಲಿಕಟ್ಟಿ, ಡಿ.ವೈ. ಪಾಟೀಲ, ಸಿ.ಸಿ. ಗಂಗಾಧರ, ಎಂ.ಎಸ್. ನಡುವಿನಹಳ್ಳಿ ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು. 75 ವಸಂತ ಪೂರೈಸಿದ 9 ಸದಸ್ಯರನ್ನು ಸನ್ಮಾನಿಸಲಾಯಿತು.
ನಿವೃತ್ತ ಹೆಚ್ಚುವರಿ ರೇಷ್ಮೆ ನಿರ್ದೇಶಕ ಎಂ.ಎಂ. ಖಾಜಿ ಉದ್ಘಾಟಿಸಿದರು. ನಿವೃತ್ತ ಜಂಟಿ ನಿರ್ದೇಶಕ ಪಿ. ವೆಂಕಪ್ಪ, ಸಂಘದ ರೂಪುರೇಷೆಗಳನ್ನು ವಿವರಿಸಿದರು. ಮಹಾರುದ್ರ ಬಡಿಗೇರ ಸಂಘದ ವಾರ್ಷಿಕ ವರದಿ ವಾಚನ ಮಾಡಿದರು.
ನಿವೃತ್ತ ರೇಷ್ಮೆ ನಿರೀಕ್ಷಕ ಬಿ.ಎ. ಗಾಣಿಗೇರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ರೇಷ್ಮೆ ವಿಸ್ತರಣಾಧಿಕಾರಿ ಎಸ್.ಬಿ. ಮೋಟಳ್ಳಿ ಸ್ವಾಗತಿಸಿದರು. ಸಿ.ಸಿ. ಗಂಗಾಧರ, ಮಕ್ತುಂಸಾಬ ಸಾವಂತನವರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಎಂ.ಪಿ. ಮುದ್ದಿ ಕಾರ್ಯಕ್ರಮ ನಿರೂಪಿಸಿದರು.