ಧರ್ಮಸ್ಥಳ ಕ್ಷೇತ್ರ ಸಮಾಜಕ್ಕೆ ಸಂಪತ್ತು : ಕಂಗ್ವೆ ವಿಶ್ವನಾಥ ಶೆಟ್ಟಿ ಹೇಳಿಕೆ

Published on

ಉಪ್ಪಿನಂಗಡಿ: ಧಾರ್ಮಿಕ ಕ್ಷೇತ್ರ ಸಮಾಜಕ್ಕೆ ಸಂಪತ್ತಾಗಿ ಕಾರ್ಯನಿರ್ವಹಿಸಬಹುದು ಎಂಬುದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೇ ಸಾಕ್ಷಿ. ನಾಡಿನಾದ್ಯಂತ 734 ಸ್ಮಶಾನಗಳಿಗೆ ಸಿಲಿಕಾನ್ ಚೇಂಬರ್ ನೀಡುವ ಮೂಲಕ ಸಹಕರಿಸಿದ್ದಾರೆ ಎಂದು ಉಪ್ಪಿನಂಗಡಿ ದುರ್ಗಾಗಿರಿಯ ಹರಿಶ್ಚಂದ್ರ ಘಾಟ್ ಸ್ಮಶಾನ ಸಮಿತಿ ಅಧ್ಯಕ್ಷ ಕಂಗ್ವೆ ವಿಶ್ವನಾಥ ಶೆಟ್ಟಿ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳದಿಂದ ದುರ್ಗಾಗಿರಿ ಸ್ಮಶಾನಕ್ಕೆ ಒದಗಿಸಿದ 1.51 ಲಕ್ಷ ರೂ. ವೆಚ್ಚದ ಸಿಲಿಕಾನ್ ಚೇಂಬರ್ ಹಾಗೂ ಧನಸಹಾಯ ಸ್ವೀಕರಿಸಿ ಮಾತನಾಡಿದರು.

ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ. ಮಾತನಾಡಿದರು. ಸ್ಮಶಾನ ಸಮಿತಿ ಪ್ರಮುಖರಾದ ಲೋಕೇಶ್ ಬೆತ್ತೋಡಿ, ಶ್ರೀರಾಮ ಭಟ್ ಪಾತಾಳ, ವೆಂಕಟರಮಣ ಭಟ್ ಮಣ್ಣಿಕಾನ, ಜನಾರ್ದನ ಮರಿಕೆ, ರಾಜೀವ ಹೆಗ್ಡೆ ನಿನ್ನಿಕ್ಕಲು, ಕೇಶವ ರಂಗಾಜೆ, ಮಾಲತಿ ಬೆತ್ತೋಡಿ, ರಮೇಶ್ ಭಂಡಾರಿ, ಹೊನ್ನಪ್ಪ ಗೌಡ ವರೆಕ್ಕಾ, ವಿಶ್ವನಾಥ್ ನಾಯ್ಕ, ಅನುರಾಧಾ ವರೆಕ್ಕಾ, ಪುಷ್ಪಾ ವರೆಕ್ಕಾ, ರತ್ನಾ ಬೆತ್ತೋಡಿ, ಗೋಪಾಲಕೃಷ್ಣ ಪಲ್ಲದಕೋಡಿ, ಮನೋಜ್ ವರೆಕ್ಕಾ, ಉಷಾ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net