ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮೌನ ಪ್ರತಿಭಟನಾ ಜಾಥಾ

28 Dwd 3
Published on

ಧಾರವಾಡ: ಹುಬ್ಬಳ್ಳಿಯಲ್ಲಿ ನಡೆದ ಇಬ್ಬರು ಯುವತಿಯರ ಕೊಲೆ, ಹಾಸನ ಸಂಸದ ಪ್ರಜ್ವಲ ರೇವಣ್ಣ ಲೈಂಗಿನ ದೌರ್ಜನ್ಯ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಮಂಗಳವಾರ ಮೌನ ಪ್ರತಿಭಟನಾ ಜಾಥಾ ನಡೆಸಲಾಯಿತು.
ಮಹಿಳಾ ದೌರ್ಜನ್ಯ ಖಂಡಿಸುವAಥ ಭಿತ್ತಿಪತ್ರಗಳನ್ನು ಹಿಡಿದ ನೂರಾರು ಜನರು ಕಲಾಭವನದಿಂದ ಹೊರಟ ಜಾಥಾ ಸುಭಾಸ ರಸ್ತೆ, ವಿವೇಕಾನಂದ ವೃತ್ತ, ಜ್ಯುಬಿಲಿ ವೃತ್ತದಲ್ಲಿ ಜಮಾವಣೆಗೊಂಡರು. ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ಬಂದ್ ಮಾಡಲಾಯಿತು. ಬಳಿಕ ಕಲಾಭವನದಲ್ಲಿ ಸಮಾವಶಗೊಂಡಿತು.
ಈ ವೇಳೆ ವಿಮೋಚನಾ ಸಂಸ್ಥೆಯ ಬಿ.ಎಲ್. ಪಾಟೀಲ ಮಾತನಾಡಿ, ಪ್ರಜ್ವಲ್‌ನಂಥವರು ಸಾವಿರಾರು ಮಹಿಳೆಯರ ಬದುಕು ಕಸಿದುಕೊಂಡರೂ ಆತ ವಿಜೃಂಭಿಸುತ್ತಿದ್ದಾನೆ. ಮಹಿಳೆಯರು, ಹೆಣ್ಣು ಮಕ್ಕಳಿಗೆ ಬೆಲೆ ಇಲ್ಲದ ರೀತಿ ಸಮಾಜ- ಸರ್ಕಾರ ನಡೆದುಕೊಳ್ಳುತ್ತಿವೆ. ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿವೆ. ಮಹಿಳಾ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಇವೆ. ನ್ಯಾಯದಾನ ವ್ಯವಸ್ಥೆಯ ವಿಳಂಬ ಮಹಿಳೆಯರನ್ನು ನಲುಗಿಸುತ್ತಿದೆ ಎಂದರು.
ಹAಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಮಾತನಾಡಿ, ವಿಕೃತ ಕಾಮಿಯೊಬ್ಬನಿಂದ ರಾಜ್ಯದ ಜನ ತಲೆತಗ್ಗುವಂತಾಗಿದೆ. ಹಾಸನದ ಜಿಲ್ಲೆಯ ಮಹಿಳೆಯರು ಆತ್ಮಸ್ಥೆÊರ್ಯ ಕಳೆದುಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣನನ್ನು ತಕ್ಷಣ ಬಂಽಸಿ, ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ನೀಡಬೇಕು ಎಂದರು.
ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಪ್ರೀತಿ- ಪ್ರೇಮವನ್ನು ಕಾಮವನ್ನಾಗಿ ನೋಡದೆ ಪವಿತ್ರ ಬಂಧ ಎಂದು ತಿಳಿದೊಂಡಿದ್ದರೆ ನೇಹಾ, ಅಂಜಲಿಯ೦ಥವರು ಬಲಿಯಾಗುತ್ತಿರಲಿಲ್ಲ. ದೇಶದಲ್ಲಿ ಮಹಿಳೆ ಸುರಕ್ಷಿತವಲ್ಲ ಎಂಬ ಭಾವನೆ ಬರುತ್ತಿರುವುದು ದುರಂತ ಎಂದರು.
ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು, ಮಹಿಳಾ ಸಂಘಟನೆಗಳ ಪ್ರಮುಖರು, ವಕೀಲರು, ಪ್ರಗತಿಪರ ಸಂಘಟನೆಗಳ ಮುಖ್ಯಸ್ಥರು ಜಾಥಾದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net