ಶಿರಸಿಯಲ್ಲಿ ಮೌನ ಪ್ರತಿಭಟನೆ, ಪಂಜಿನ ಮೆರವಣಿಗೆ

17sirsi3 MERAVANIGE
Published on

ಶಿರಸಿ: ಕೋಲ್ಕತದ ವೈದ್ಯ ವಿದ್ಯಾರ್ಥಿನಿಯ ಬಲಾತ್ಕಾರ ಹಾಗೂ ಕೊಲೆಯ ಕ್ರೌರ್ಯವನ್ನು ಖಂಡಿಸಿ, ಇಲ್ಲಿನ ಭಾರತೀಯ ವೈದ್ಯಕೀಯ ಸಂಘದಿಂದ ಶುಕ್ರವಾರ ಮೌನ ಪ್ರತಿಭಟನೆ ಹಾಗೂ ನಗರದಾದ್ಯಂತ ಪಂಜಿನ ಮೆರವಣಿಗೆ ನಡೆಸಲಾಯಿತು.

ನಗರದ ದೇವಿಕೆರೆ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಹಳೇ ಬಸ್ ನಿಲ್ದಾಣ ವೃತ್ತ, ಬಿಡ್ಕಿಬೈಲ್, ಸಿ.ಪಿ. ಬಜಾರ್, ಬಾರಕೂರ ಚೌಕ್ ಉಣ್ಣೆಮಠಗಲ್ಲಿ ಮೂಲಕ ದೇವಿಕೆರೆ ವೃತ್ತದ ಬಳಿ ಕೊನೆಗೊಂಡಿತು. ಬಲಾತ್ಕಾರಗೈದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ವೈದ್ಯರ ಮೇಲಿನ ದೌರ್ಜನ್ಯ ಕೊನೆಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೌನ ಪ್ರತಿಭಟನೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಮಧುಕೇಶ್ವರ ಜಿ.ವಿ., ಕಾರ್ಯದರ್ಶಿ ಡಾ.ಸುಮನ ಹೆಗಡೆ, ವೈದ್ಯರಾದ ಡಾ.ದಿನೇಶ ಹೆಗಡೆ, ಡಾ.ಶಿವರಾಮ ಕೆ.ವಿ, ಡಾ. ರವಿಕಿರಣ ಪಟವರ್ಧನ ಸೇರಿ ನೂರಾರು ವೈದ್ಯರು, ಸ್ಕೊಡ್ ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ, ಆಸ್ಪತ್ರೆಯ ನರ್ಸ್​ಗಳು, ಸ್ಕೊಡ್ ವೆಸ್ ಆರೋಗ್ಯ ಕಾರ್ಯಕರ್ತರು ಪಾಲ್ಗೊಂಡಿದ್ದರು. ತಾಲೂಕು ಔಷಧ ವ್ಯಾಪಾರಸ್ಥರ ಸಂಘ ಬೆಂಬಲ ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net