ಜೈನ ಮುನಿ ಹತ್ಯೆ ಖಂಡಿಸಿ ಮೌನ ಮೆರವಣಿಗೆ

Guttala
Published on

ಗುತ್ತಲ: ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಪಟ್ಟಣದ ದಿಗಂಬರ ಜೈನ ಸಮಾಜ ಹಾಗೂ ವಿವಿಧ ಸಂಘ ವತಿಯಿಂದ ಶುಕ್ರವಾರ ಮೌನ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಎಸ್‌ಆರ್‌ಎಸ್ ಸರ್ಕಲ್ ನಿಂದ ರಾಣೆಬೆನ್ನೂರ ರಸ್ತೆಯಲ್ಲಿನ ನಾಡ ಕಚೇರಿಯ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ನಂತರ ಕಂದಾಯ ನಿರೀಕ್ಷಕ ಆರ್.ಎನ್. ಮಲ್ಲಾಡದ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಜೈನ ಸಮಾಜದ ಪ್ರದೀಪ ಬಳಿಗಾರ ಮಾತನಾಡಿ, ಮುನಿಗಳ ಹತ್ಯೆ ಖಂಡನೀಯ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದರು.

ಪಿಎಸ್‌ಐ ಶಂಕರಗೌಡ ಪಾಟೀಲ, ಜಿ.ಪಂ. ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ, ಸಂಗಯ್ಯಸ್ವಾಮಿ ಭೂಸನೂರಮಠ, ಬಸಣ್ಣ ನೀರಲಗಿ, ಚಂದ್ರನಾಥ ಬಳಿಗಾರ, ಅಜಿತಕುಮಾರ ಮರೆಗೌಡ್ರ, ಸನತಕುಮಾರ ಬಳಿಗಾರ, ವಿಜಯಕುಮಾರ ಬಳಿಗಾರ, ವಸಂತ ಲಂಗೋಟಿ, ಶ್ರೀಧರ ಬಳಿಗಾರ, ಪಪಂ ಸದಸ್ಯ ಮಾಲತೇಶ ಶೀತಾಳ, ತೇಜರಾಜ ಜಾನ್ಮನೆ, ಲಿಂಗೇಶ ಬೆನ್ನೂರ, ರುದ್ರಪ್ಪ ಇಚ್ಚಂಗಿ, ಮಂಜುನಾಥ ಮರಿಯಾನಿ, ಶಿವಕುಮಾರ ಮರಿಯಾನಿ, ಅಶೋಕ ತೇಲ್ಕರ, ಪ್ರಕಾಶ ಪಠಾಡೆ, ಅಜ್ಜಪ್ಪ ರೊಟ್ಟಿ, ಫಕ್ಕೀರೇಶ ಭರಮಜ್ಜನವರ, ಮೌನೇಶ ಬಡಿಗೇರ, ರಾಜೇಂದ್ರ ಬಳಿಗಾರ, ಬಸವರಾಜ ಸಿದ್ದಾಪುರ, ಮಲ್ಲಿಕಾರ್ಜುನ ಮರಿಯಾನಿ, ನಂದಾ ಲಂಗೋಟಿ, ಮೋಹನ ಮಣಿ, ರಜನಿ ಲಂಗೋಟಿ, ವಾಣಿ ಲಂಗೋಟಿ, ಅನಂತರಾಜ ಬಳಿಗಾರ, ರವಿಚಂದ್ರ ಮರೆಗೌಡ್ರ, ಹೇಮರಾಜ ಬಳಿಗಾರ, ಡಾ.ಬ್ರಹ್ಮಕುಮಾರ ಬಳಿಗಾರ, ಸಾಗರ ಬಳಿಗಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net